BengaluruPolitics

ಡಿ.ಕೆ.ಶಿವಕುಮಾರ್‌ ವಿರುದ್ಧದ ಕಮೀಷನ್‌ ಆರೋಪ ಪ್ರಕರಣ; ಉಲ್ಟಾ ಹೊಡೆದ ಗುತ್ತಿಗೆದಾರ

ಬೆಂಗಳೂರು; ಕಾಮಗಾರಿಗಳ ಬಿಲ್‌ ಪಾವತಿಗೆ ಬಿಬಿಎಂಪಿ ಕಮೀಷನರ್‌ ಮೂಲಕ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಹತ್ತರಿಂದ ಹದಿನೈದು ಪರ್ಸೆಂಟ್‌ ಕಮೀಷನ್‌ ಕೇಳುತ್ತಿದ್ದಾರೆ. ನಮ್ಮ ಆರೋಪ ಸುಳ್ಳು ಅನ್ನೋದಾದರೆ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಬಿಬಿಎಂಪಿ ಗುತ್ತಿಗೆದಾರರ ಸಂಘದ ಹೇಮಂತ್‌ ಕುಮಾರ್‌ ಸವಾಲು ಹಾಕಿದ್ದರು. ಆದ್ರೆ ಇದೀಗ ಹೇಮಂತ್‌ ಕುಮಾರ್‌ ಉಲ್ಟಾ ಹೊಡೆದಿದ್ದಾರೆ. ನನ್ನ ಹೇಳಿಕೆಯನ್ನು ನಾನು ಹಿಂಪಡೆಯುತ್ತೇವೆ. ನಾನು ಇಂತಹ ಹೇಳಿಕೆ ನೀಡಿದ್ದು ತಪ್ಪು, ಅದನ್ನು ಹಿಂಪಡೆದು ಡಿ.ಕೆ.ಶಿವಕುಮಾರ್‌ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಯಾವುದೇ ಪಕ್ಷಕ್ಕೆ ಸೇರಿದವನಲ್ಲ. ಎಸ್‌ಐಟಿ ತನಿಖೆ ಮಾಡಿಸುತ್ತಿದ್ದಾರೆ ಎಂದು ಗೊತ್ತಾಯಿತು. ಹೀಗಾಗಿ ನಾನು ಭಾವುಕನಾಗಿ ಹಾಗೆ ಮಾತನಾಡಿದ್ದೇವೆ. ವಿರೋಧ ಪಕ್ಷಗಳವರು ಇದನ್ನೇ ಅಸ್ತ್ರವಾಗಿ ಬಳಸಿಕೊಂಡಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರಿಗೆ ಅಜ್ಜಯ್ಯ ಅಂದ್ರೆ ಎಮೋಷನ್‌, ಹೀಗಾಗಿ ನಾನು ಹಾಗೆ ಮಾತನಾಡಿದ್ದೆ. ಅದು ತಪ್ಪು ಎಂದು ಎಲ್ಲರೂ ಹೇಳಿದರು. ಹೀಗಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.

Share Post