Bengaluru

ಕಾವೇರಿ ವಿಚಾರದಲ್ಲಿ ತಮಿಳುನಾಡಿನ ನಿಲುವಿಗೆ ಸಿಎಂ ಖಂಡನೆ: ಮೇಕೆದಾಟು ವಿಚಾರವಾಗಿ ನಮಗೆ ಅನುಮತಿ ಸಾಕು-ಡಿ.ಕೆ.ಸುರೇಶ್

ಬೆಂಗಳೂರು: ಕಾವೇರಿ ನೀರಿನ ವಿಚಾರವಾಗಿ ತಮಿಳುನಾಡು ಹಾಗೂ ಕರ್ನಾಟಕದ ನಡುವೆ ನಡೆಯುತ್ತಿರುವ ಗದ್ದಲ ಇಂದು ನಿನ್ನೆಯದಲ್ಲ. ಸುಮಾರು ದಶಕಗಳಿಂದ ತಮಿಳುನಾಡು ಕಾವೇರಿ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಲೇ ಇರುತ್ತದೆ ಈ ವಿಚಾರವಾಗಿ ಇಂದು ವಿಧಾನಸೌಧದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರು ಕಾವೇರಿ ವಿಚಾರ ತಮಿಳುನಾಡಿನವರಿಗೆ ಒಂದು ರಾಜಕೀಯ ದಾಳ ಎಂದಿದ್ದಾರೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಅವರ ಈ ರೀತಿಯ ನಾಟಕ ಮುಂದುವರೆಯುತ್ತಲೇ ಇದೆ. ಟ್ರಿಬ್ಯುನಲ್‌ ಮೂಲಕ ಕಾವೇರಿ ನೀರು ಹಂಚಿಕೆ ಆಗುತ್ತಿದೆ. ನಾವು ಸರ್ವಪಕ್ಷ ಸಭೆ ಮಾಡಿದ್ದಕ್ಕೆ ಅವರು ಹಾಗೆ ಮಾಡಿದ್ದಾರೆ. ಇದು ರಾಜಕೀಯ ಸ್ಟಂಟ್ ಅಷ್ಟೇ. ನಾವು ಸರ್ವಪಕ್ಷ ಸಭೆಯಲ್ಲಿ ಏನು ನಿರ್ಧಾರ ಮಾಡಿದ್ದೇವೋ ಅದೆಲ್ಲವೂ ಡಿಪಿಆರ್‌ನಿಂದ ಇತ್ಯರ್ಥ ಮಾಡಿಕೊಳ್ಳುತ್ತೇವೆ. ತಮಿಳುನಾಡಿನ ನಿರ್ಧಾರಕ್ಕೆ ಯಾವುದೇ ಬೆಲೆ ಇಲ್ಲ ಎಂದು  ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಹಣವೂ ಬೇಡ..ಭೂಮಿಯೂ ಬೇಡ..ಅನುಮತಿ ಕೊಡಿ ಸಾಕು-ಡಿ.ಕೆ.ಸುರೇಶ್‌

ಇನ್ನೂ ಮೇಕೆದಾಟು ಯೋಜನೆ ವಿಚಾರವಾಗಿ ತಮಿಳುನಾಡಿಗೆ ಅನ್ಯಾಯವಾಗುತ್ತೆ ಎಂದು ಅವರ ನಿರ್ಣಯದ ವಿಚಾರವಾಗಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್‌ ಅವರು ಈ ವಿಚಾರದಲ್ಲಿ ತಮಿಳುನಾಡಿನವರೆಗೆ ಯಾವುದೇ ಅನ್ಯಾಯವಾಗಿಲ್ಲ ಈ ಬಗ್ಗೆ ಅವರಿಗೆ ಸಿಎಂ ಬಸವರಾಜ್‌ ಬೊಮ್ಮಾಯಿಯವರೇ ಮನವರಿಕೆ ಮಾಡಿಕೊಡಬೇಕು ಎಂದು ಡಿ.ಕೆ.ಸುರೇಶ್‌ ಆಗ್ರಹಿಸಿದ್ದಾರೆ.

ಇನ್ನೂ ಈ ಯೋಜನೆಗೆ ಸಂಬಂಧಿಸಿದಂತೆ ನಮಗೆ ಕೇಂದ್ರ ಸರ್ಕಾರದಿಂದ ಯಾವುದೇ  ಭೂಮಿ, ಹಣ, ಯಾವುದೂ ಬೇಡ. ನಮಗೆ ಬೇಕಿರುವುದು ಕೇವಲ ಅನುಮತಿ ಮಾತ್ರ. ಅನುಮತಿ ಸಿಕ್ಕರೆ ನಮ್ಮ ಕೆಲಸವನ್ನು ನಾವು ಮಾಡಿಕೊಳ್ಳುತ್ತೇವೆ. ಈ ಅನುಮತಿ ಪಡೆಯವ ಕೆಲಸ ರಾಜ್ಯ ಸರ್ಕಾರದಿಂದ ಆಗಬೇಕು ಇಲ್ಲದಿದ್ದಲ್ಲಿ ರಾಜ್ಯದ ಜನರಿಗೆ ಅನ್ಯಾಯ ಮಾಡಿದಂತೆ ಎಂದು ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ ಹೇಳಿದ್ದಾರೆ.

Share Post