ಖಾಸಗಿ ಶಾಲೆ ವಿರುದ್ಧ ಧರ್ಮಬೋಧನೆ ಆರೋಪ; ಆಡಳಿತ ಮಂಡಳಿ ಏನು ಹೇಳುತ್ತೆ..?
ಬೆಂಗಳೂರು: ಕ್ಲಾರೆನ್ಸ್ ಪ್ರೌಢಶಾಲೆಯಲ್ಲಿ ಧರ್ಮಬೋಧನೆ ಮಾಡಲಾಗುತ್ತಿದೆ. ಮಕ್ಕಳಿಗೆ ಇಷ್ಟವಿಲ್ಲದಿದ್ದರೂ ಅವರ ಮೇಲೆ ಹೇರಿಕೆ ಮಾಡಲಾಗುತ್ತಿದೆ ಎಂದು ಕೆಲ ಹಿಂದೂ ಸಂಘಟನೆಗಳು ಆರೋಪ ಮಾಡಿವೆ. ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳುವ ವೇಳೆಯೇ ಪೋಷಕರಿಂದ ಸಹಿ ಹಾಕಿಸಿಕೊಳ್ಳಲಾಗಿದ್ದು, ಶಾಲೆಯ ನಿಮಗಳಲ್ಲಿ ಧರ್ಮಬೋಧನೆ ಕೂಡಾ ಸೇರಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಲೆಯ ಪ್ರಾಂಶುಪಾಲ ಜೆರ್ರಿ ಜಾರ್ಜ್ ಮ್ಯಾಥ್ಯೂ, ಕೆಲವರು ನಮ್ಮ ಶಾಲೆಯ ನೀತಿಯ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ಹೀಗಾಗಿ ನಮ್ಮ ಶಾಲೆಯ ಟ್ರಸ್ಟ್ ಹಾಗೂ ಬೋರ್ಡ್ ಆಫ್ ಮ್ಯಾನೇಜ್‌ಮೆಂಟ್ ಪರವಾಗಿ ನಾನು ಸಮಜಾಯಿಷಿ ನೀಡುತ್ತಿದ್ದೇನೆ. ನಮ್ಮ ಶಾಲೆ ಶಾಂತಿಪ್ರಿಯ ಹಾಗೂ ಕಾನೂನು ಪಾಲಿಸುವ ಶಾಲೆಯಾಗಿದೆ. ನಾವು ನಮ್ಮ ವಕೀಲರ ಸಲಹೆಯನ್ನು ಕೇಳಿದ್ದೇವೆ. ನಮ್ಮ ವಕೀಲರ ಮಾರ್ಗಸೂಚಿಗಳನ್ನು ನಾನು ಅನುಸರಿಸುತ್ತೇವೆ ಎಂದು ಹೇಳಿದ್ದಾರೆ.