ಕಾವೇರಿ ಹೋರಾಟ; ಮಂಗಳವಾರ ಬೆಂಗಳೂರು ಬಂದ್
ಬೆಂಗಳೂರು; ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಪ್ರತಿಭಟನೆ ಜೋರಾಗಿದೆ. ಇಂದು ಮಂಡ್ಯ ಬಂದ್ ನಡೆಯುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಿನಲ್ಲೂ ಹಲವು ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ವಿವಿಧ ಕನ್ನಡಪರ ಹಾಗೂ ರೈತರ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಇನ್ನು ಈ ಬೆನ್ನಲ್ಲೇ ಬೆಂಗಳೂರು ಬಂದ್‌ಗೆ ಸಿದ್ಧತೆ ನಡೆಯುತ್ತಿದೆ. ಮಂಗಳವಾರ ಬೆಂಗಳೂರು ಬಂದ್ ಮಾಡಲು ನಿರ್ಧಾರ ಮಾಡಲಾಗಿದೆ.
ಮಂಗಳವಾರ ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದೆ.. ಈಗಾಗಲೇ ಹತ್ತಕ್ಕೂ ಹೆಚ್ಚು ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ. ಇಂದು ಹಲವು ಸಂಘಟನೆಗಳು ಸಭೆ ಸೇರಿ ಅಂತಿಮ ತೀರ್ಮಾನ ಕೈಗೊಂಡಿವೆ. ಕನ್ನಡ ಚಳುವಳಿ ಕೇಂದ್ರ ಸಮಿತಿ, ಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘ, ತಮಿಳುಸಂಘ, ಕೆಂಪೇಗೌಡ ಸಮಿತಿ, ರಾಜಸ್ಥಾನಿ ಭಾಷಿಕರ ಸಂಘ, ಜಯಕರ್ನಾಟಕ ಸಂಘಟನೆ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಆಮ್ ಆದ್ಮಿ ಪಕ್ಷ, ತಲಕಾಡು ಸಂಶೋಧಕರ ಸಂಘ, ರಾಷ್ಟ್ರೀಯ ಚಾಲಕರ ಒಕ್ಕೂಟ, ಕನ್ನಡಪರ ಹೋರಾಟಗಾರರ ಸಂಘ, ಬಿ ಕರ್ನಾಟಕ ರಕ್ಷಣಾ ಸೇನೆ ಸೇರಿದಂತೆ ಹಲವು ಸಂಘಟನೆಗಳು ಈಗಾಗಲೇ ಬಂದ್‌ಗೆ ಬೆಂಬಲ ಸೂಚಿಸಿವೆ.