BengaluruPolitics

40 ಪರ್ಸೆಂಟ್‌ ಕಮೀಷನ್‌ ಬರಹವುಳ್ಳ ಮಾಸ್ಕ್‌ ಹಾಕಿಕೊಂಡು ಬಂದ ಕಾಂಗ್ರೆಸ್‌ ಸದಸ್ಯರು

ಬೆಂಗಳೂರು; ನಿನ್ನೆಯಷ್ಟೇ ಪೇಸಿಎಂ ಎಂಬ ಪೋಸ್ಟರ್‌ಗಳನ್ನು ಅಂಟಿಸಿದ್ದ ಕಾಂಗ್ರೆಸ್ಸಿಗರು ಇಂದು ಮತ್ತೊಂದು ವಿನೂತನ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ಶಾಸಕರು ನಲವತ್ತು ಪರ್ಸೆಂಟ್‌ ಸರ್ಕಾರ ಎಂದು ಮುದ್ರಿಸಿದ್ದ ಮಾಸ್ಕ್‌ಗಳನ್ನು ಧರಿಸಿ ಪರಿಷತ್‌ಗೆ ಆಗಮಿಸಿದ್ದರು. ಇದರಿಂದಾಗಿ ಆಡಳಿತ ಪಕ್ಷದವರು ಆಕ್ರೋಶ ವ್ಯಕ್ತಪಡಿಸಿದರು. 

   ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಪರಿಷತ್​​ನಲ್ಲಿ 40 ಪರ್ಸೆಂಟ್ ಕಮಿಷನ್ ಎಂದು ಮಾಸ್ಕ್ ಮೇಲೆ ಬರೆಸಿಕೊಂಡು ಕಾಂಗ್ರೆಸ್ ಸದಸ್ಯರು ಸದನಕ್ಕೆ ಆಗಮಿಸಿದರು. ಇದು ಆಡಳಿತ ಪಕ್ಷ ಸದಸ್ಯರನ್ನು ಕೆರಳಿಸಿದ್ದು, ಪ್ರತಿಪಕ್ಷದ ವಿರುದ್ಧ ಬಿಜೆಪಿ ಸದಸ್ಯರು ಹರಿಹಾಯ್ದರು. ಈ ವೇಳೆ ಮಾತನಾಡಿದ ಪ್ರತಿಪಕ್ಷ ಸದಸ್ಯರು ಸರ್ಕಾರ ಏಕ ಪಕ್ಷೀಯವಾಗಿ ಕ್ರಮ ತೆಗದುಕೊಂಡಿದೆ. ರಾತ್ರೋರಾತ್ರಿ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷರನ್ನು ಬಂಧನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚರ್ಚೆಗೆ ಅವಕಾಶ ನೀಡುವಂತೆ ಪಟ್ಟುಹಿಡಿದು ಸದನಕ್ಕೆ ಬಾವಿಗಿಳಿದು ಧರಣಿ ನಡೆಸಿದರು.

ಇದು ಹೇಡಿಗಳು ಮಾಡುವ ಕೆಲಸ ಎಂದು ಕಂದಾಯ ಸಚಿವ ಅಶೋಕ್ ಟೀಕಿಸಿದರು. ಈ ವೇಳೆ ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಗದ್ದಲ ಹೆಚ್ಚಾದ ಕಾರಣ ಕಲಾಪವನ್ನು 10 ನಿಮಿಷಗಳ ಕಾಲ ಸಭಾಪತಿಗಳು ಮುಂದೂಡಿದರು.

Share Post