ಸ್ತಬ್ಧ ಚಿತ್ರಗಳ ಆಯ್ಕೆ ವಿಚಾರದಲ್ಲಿ ರಾಜಕೀಯ ಬೇಡ: ಬಿಎಸ್ವೈ
ಬೆಂಗಳೂರು: ಜನವರಿ 26ರಂದು ಗಣರಾಜ್ಯೋತ್ಸವಕ್ಕೆ ದೆಹಲಿಯಲ್ಲಿ ನಡೆಯುವ ಪರೇಡ್ನಲ್ಲಿ ಸ್ತಬ್ಧಚಿತ್ರ ಪ್ರದರ್ಶನ ವಿಚಾರದಲ್ಲಿ ಭುಗಿಲೆದ್ದರುವ ಅಸಮಾಧನದ ಕುರಿತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಟ್ವೀಟ್ ಮಾಡಿದ್ದಾರೆ.
ʻಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಪ್ರದರ್ಶನಗೊಳ್ಳುವ ರಾಜ್ಯಗಳ ಸ್ತಬ್ಧಚಿತ್ರಗಳನ್ನು, ನಿರ್ದಿಷ್ಟ ಮಾರ್ಗಸೂಚಿಗಳ ಅನ್ವಯ ಆಯ್ಕೆ ಮಾಡುವುದು ರಕ್ಷಣಾ ಸಚಿವಾಲಯ. ನಿಯಮಗಳನ್ವಯವೇ ಪ್ರತಿವರ್ಷ ಹೀಗೆಯೇ ನಡೆಯುತ್ತಿದೆ. ಅನಗತ್ಯವಾಗಿ ಇದರಲ್ಲೂ ರಾಜಕೀಯ ಮಾಡುವ, ಶ್ರೇಷ್ಠ ವ್ಯಕ್ತಿಗಳ ಹೆಸರಿನಲ್ಲಿ ಸೌಹಾರ್ದತೆಗೆ ಭಂಗ ತರುವ ಪ್ರವೃತ್ತಿ ಖಂಡನೀಯʼ ಎಂದು ಟ್ವಿಟ್ಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಪ್ರದರ್ಶನಗೊಳ್ಳುವ ರಾಜ್ಯಗಳ ಸ್ತಬ್ಧಚಿತ್ರಗಳನ್ನು, ನಿರ್ದಿಷ್ಟ ಮಾರ್ಗಸೂಚಿಗಳ ಅನ್ವಯ ಆಯ್ಕೆ ಮಾಡುವುದು ರಕ್ಷಣಾ ಸಚಿವಾಲಯ. ನಿಯಮಗಳನ್ವಯವೇ ಪ್ರತಿವರ್ಷ ಹೀಗೆಯೇ ನಡೆಯುತ್ತಿದೆ. ಅನಗತ್ಯವಾಗಿ ಇದರಲ್ಲೂ ರಾಜಕೀಯ ಮಾಡುವ, ಶ್ರೇಷ್ಠ ವ್ಯಕ್ತಿಗಳ ಹೆಸರಿನಲ್ಲಿ ಸೌಹಾರ್ದತೆಗೆ ಭಂಗ ತರುವ ಪ್ರವೃತ್ತಿ ಖಂಡನೀಯ.
— B.S. Yediyurappa (@BSYBJP) January 19, 2022
ಇನ್ನೂ ಸತ್ಯಾಸತ್ಯತೆ ಪರಿಶೀಲಿಸದೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿರುವವರನ್ನು ಕೇಂದ್ರ ತರಾಟೆಗೆ ತೆಗೆದುಕೊಂಡಿದೆ. ಸ್ತಬ್ಧ ಚಿತ್ರಗಳನ್ನು ಆಯ್ಕೆ ಮಾಡುವುದಕ್ಕೆ ಸಮಿತಿ ರಚಿಸಲಾಗಿದೆ. ತಜ್ಞರು ನೀಡುವ ಲಿಸ್ಟ್ ಮೇರೆಗೆ ಸ್ತಬ್ಧ ಚಿತ್ರಗಳ ಆಯ್ಕೆ ನಡೆಯುತ್ತದೆ ಎಂದು ಪರಾಮರ್ಶೆ ನೀಡಿದೆ.