ಒತ್ತುವರಿ ತೆರವುಗೊಳಿಸದಿದ್ದರೆ ಕ್ರಮ; ಡಿಸಿಎಂ ಡಿ.ಕೆ.ಶಿವಕುಮಾರ್ ಎಚ್ಚರಿಕೆ
ಬೆಂಗಳೂರು; ರಾಜಕಾಲುವೆ ಒತ್ತುವರಿ ಮಾಡಿರುವವರು ಈ ಕೂಡಲೇ ತೆರವು ಮಾಡಬೇಕು. ಇಲ್ಲದಿದ್ದರೆ ಕಾನೂನು ಪ್ರಕಾರ ನಾವೇ ತೆರವು ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಮಳೆಗಾಲ ಶುರುವಾಗುತ್ತಿರುವ ಹಿನ್ನೆಲೆಯಲ್ಲಿ ರಾಜುಕಾಲುವೆಗಳ ಪರಿಶೀಲನೆ ನಡೆಸಿದ ನಂತರ ಅವರು ಮಾತನಾಡಿದರು.
ರಾಜಕಾಲುವೆ ಒತ್ತುವರಿದಾರರೇ ನೀವೇ ಮುಂಜಾಗ್ರತಾ ಕ್ರಮ ಒತ್ತುವರಿ ತೆರವು ಮಾಡಿ. ಇಲ್ಲದಿದ್ದರೆ ನಾವೇ ಆ ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇನ್ನು ಕೆಲವು ಡೆವೆಲಪರ್ಗಳು ಕೋರ್ಟ್ ಮುಖಾಂತರ ಸ್ಟೇ ತಂದಿರಬಹುದು. ಆದ್ರೆ ನಾವು ನಮ್ಮ ಕೈಯಲ್ಲಿರುವ ಕಾನೂನನ್ನು ಬಳಕೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನು ಬಲ್ಡೋಜರ್ ನಿಲ್ಲಿಸಿರುವುದರ ಬಗ್ಗೆ ಮಾತನಾಡಿದ ಅವರು, ಬುಲ್ಡೋಜರ್ ಕಾರ್ಯಾಚರಣೆ ನಿಲ್ಲಿಸಿಲ್ಲ. ಬುಲ್ಡೋಜರ್ ನಿಲ್ಲಿಸಲು ಯಾರಿಗೂ ಹೇಳಿಲ್ಲ ಎಂದು ಸ್ಪಷ್ಟನೆ ಕೊಟ್ಟರು.