ಅಮಿತ್ ಷಾಗೆ ಬೆಳ್ಳಿ ತಟ್ಟೆಯಲ್ಲಿ ಹೋಳಿಗೆ ಊಟ; ಸಂಪುಟ ವಿಸ್ತರಣೆ ವಿಚಾರ ಏನಾಯ್ತು..?
ಬೆಂಗಳೂರು: ಕೇಂದ್ರ ಗೃಹಸಚಿವ ಅಮಿತ್ ಶಾ ಇಂದು ರಾಜ್ಯ ಬಿಜೆಪಿ ನಾಯಕರ ಪ್ರಮುಖ ಸಭೆ ಕರೆದಿದ್ದರು. ಆದ್ರೆ, ದಿಢೀರ್ ಅಂತ ಆ ಸಭೆ ರದ್ದಾಯಿತು. ಅನಂತರ ಅವರು, ಸಿಎಂ ಬೊಮ್ಮಾಯಿ ನಿವಾಸದಲ್ಲಿ ಭೋಜನಕೂಟದಲ್ಲಿ ಪಾಲ್ಗೊಂಡಿದ್ದರು. ಈ ವೇಳೆಯೇ ಕೆಲ ಪ್ರಮುಖ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ. ಅಲ್ಲಿ ಏನು ಚರ್ಚೆ ನಡೆಯಿತು ಎಂಬುದೇ ಕುತೂಹಲದ ವಿಚಾರ.
ಇಂದು ಮಧ್ಯಾಹ್ಮ ಅಮಿತ್ ಷಾ ಅವರಿಗೆ ಬೆಳ್ಳಿ ತಟ್ಟೆಯಲ್ಲಿ ಹೋಳಿಗೆ ಊಟವನ್ನು ಬಡಿಸಲಾಯಿತು. ಬಸವ ಜಯಂತಿ ಮತ್ತು ಅಕ್ಷಯ ತೃತೀಯ ಪ್ರಯುಕ್ತ ಹೋಳಿಗೆ ಊಟ ಏರ್ಪಡಿಸಲಾಗಿತ್ತು. ಶಾ ಅವರ ಜತೆ ಮುಖ್ಯಮಂತ್ರಿ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಬಿ.ಎಸ್.ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಒಟ್ಟಿಗೆ ಕುಳಿತು ಮಾತನಾಡುತ್ತಾ ಭೋಜನ ಸೇವಿಸಿದರು. ಸಚಿವರಾದ ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಬಿ.ಸಿ.ನಾಗೇಶ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದರಾದ ಜಿ.ಎಂ.ಸಿದ್ದೇಶ್, ಜಿ.ಎಸ್.ಬಸವರಾಜ್, ಡಿ.ವಿ.ಸದಾನಂದಗೌಡ, ಶಾಸಕರಾದ ಅಶ್ವತ್ಥನಾರಾಯಣ, ರಾಜಕುಮಾರ್ ಪಾಟೀಲ ತೆಲ್ಕೂರ್, ಸುರೇಶ್ ಕುಮಾರ್, ರವಿಸುಬ್ರಹ್ಮಣ್ಯ, ಎಂ.ಪಿ.ರೇಣುಕಾಚಾರ್ಯ, ಕುಮಾರ್ ಬಂಗಾರಪ್ಪ, ಎಸ್.ಆರ್.ವಿಶ್ವನಾಥ್, ವಿಧಾನಪರಿಷತ್ ಸದಸ್ಯರ ಎನ್.ರವಿಕುಮಾರ್, ಸಿ.ಪಿ.ಯೋಗೇಶ್ವರ್, ರೂಪಾಲಿ ನಾಯ್ಕ, ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮುಂತಾದವರು ಕೂಡಾ ಭೋಜನಕೂಟದಲ್ಲಿ ಭಾಗವಹಿಸಿದ್ದರು.
ಆ ಬಳಿಕ ಅಮಿತ್ ಶಾ ಅವರು ಜಿಂದಾಲ್‌ಗೆ ತೆರಳಿದರು.