BengaluruEconomy

ಬೆಂಗಳೂರು-ಮೈಸೂರು ಬಸ್‌ ಪ್ರಯಾಣ ಹೆಚ್ಚಳ; ಯಾವ ಬಸ್‌ನಲ್ಲಿ ಎಷ್ಟು..?

ಬೆಂಗಳೂರು; ಬೆಂಗಳೂರು-ಮೈಸೂರು ದಶಪಥ ರಸ್ತೆಯಲ್ಲಿ ಟೋಲ್‌ ಸಂಗ್ರಹ ನಿನ್ನೆಯಿಂದ ಶುರುವಾಗಿದೆ. ಅವೈಜ್ಞಾನಿಕವಾಗಿ ಟೋಲ್‌ ಸಂಗ್ರಹಿಸಲಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ. ಈ ನಡುವೆ ರಾಜ್ಯ ಸಾರಿಗೆ ಸಂಸ್ಥೆ ಈ ಮಾರ್ಗದ ಬಸ್‌ಗಳಲ್ಲಿ ಪ್ರಯಾಣ ದರ ಏರಿಕೆ ಮಾಡಿದೆ.

   ಯಾವ ಬಸ್‌ನಲ್ಲಿ ಎಷ್ಟು ಏರಿಕೆ..?

೧. ಕೆಎಸ್‌ಆರ್‌ಟಿಸಿ ಸಾಮಾನ್ಯ ಬಸ್‌; 15 ರೂಪಾಯಿ

೨. ರಾಜಹಂಸ ಬಸ್‌; 18 ರೂಪಾಯಿ

೩. ಐರಾವತ; 20 ರೂಪಾಯಿ

ಟೋಲ್‌ಗಳಲ್ಲಿ ಸರಿಯಾದ ವ್ಯವಸ್ಥೆಯೇ ಇಲ್ಲ ಆಗಲೇ ಟೋಲ್‌ ಸಂಗ್ರಹ ಮಾಡಲಾಗುತ್ತಿದೆ. ಒಂದು ಟೋಲ್‌ನಲ್ಲಿ ವಾಹನ ಪ್ರವೇಶ ಮಾಡಿದರೂ ಎರಡೂ ಟೋಲ್‌ನ ಹಣ ಪಡೆಯಲಾಗುತ್ತಿದೆ ಹೀಗೆ ಹಲವು ಆರೋಪಗಳು ಕೇಳಿಬರುತ್ತಿವೆ. ವಾಹನ ಸವಾರರದ್ದು ಈ ಸಮಸ್ಯೆಯಾದರೆ, ಬಸ್‌ ಪ್ರಯಾಣಿಕರು ಪ್ರಯಾಣ ದರ ಏರಿಕೆಯಿಂದ ಪರಿತಪಿಸುವಂತಾಗಿದೆ.

Share Post