ಸಿಮೆಂಟ್ ರಸ್ತೆ ಬೇಡವೆಂದು ಪಟ್ಟು; ಶಂಕುಸ್ಥಾಪನೆ ಮಾಡದೆ ತೆರಳಿದ ಕಾಗೇರಿ
ಕಾರವಾರ; ಸ್ಪೀಕರ್ ಕಾಗೇರಿಯವರಿಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಅವರು ಸಿದ್ದಾಪುರದ ಬೇಡ್ಕಣಿಯನ್ನು ನಿರ್ಮಿಸಲು ಉದ್ದೇಶಿಸಿರುವ ಸಿಮೆಂಟ್ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಲು ಬಂದಿದ್ದರು. ಆದ್ರೆ ಸ್ಥಳೀಯರ ಸಿಮೆಂಟ್ ರಸ್ತೆ ಬೇಡ, ಟಾರ್ ರಸ್ತೆ ಹಾಕಿಸುವಂತೆ ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ ಅವರು ಅಲ್ಲಿಂದ ವಾಪಸ್ ತೆರಳಿದ್ದಾರೆ.
ಬೇಡ್ಕಣಿಯಲ್ಲಿ 300 ಮೀಟರ್ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಕ್ಕಾಗಿ ಸ್ಪೀಕರ್ ಕಾಗೇರಿ ಆಗಮಿಸಿದ್ದರು. ಆದ್ರೆ ಕಾಗೇರಿ ಮುಂದೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿಂದೆ ಕೂಡಾ ಕಳಪೆ ಕಾಮಗಾರಿ ಮಾಡಲಾಗಿತ್ತು. ಇದರಿಂದ ರಸ್ತೆ ಹಾಳಾಗಿತ್ತು. ಇದೀಗ ಮತ್ತೆ ಕಾಂಕ್ರೀಟ್ ರಸ್ತೆ ಮಾಡಿದರೆ ಮತ್ತೆ ರಸ್ತೆ ಹಾಳಾಗುತ್ತೆ. ಹೀಗಾಗಿ ಟಾರ್ ರಸ್ತೆ ಮಾಡಿಸಿ ಎಂದು ಪಟ್ಟು ಹಿಡಿದರು. ಆಕ್ರೋಶ ಹೆಚ್ಚಾಗುತ್ತಿದ್ದಂತೆ ಕಾಗೇರಿಯವರು ಶಂಕುಸ್ಥಾಪನೆ ನೆರವೇರಿಸದೆ ಕಾರು ಹತ್ತಿ ಅಲ್ಲಿಂದ ಹೊರಟಿದ್ದಾರೆ.