BengaluruPolitics

ಗ್ಯಾರೆಂಟಿ ಯೋಜನೆ; ಅಪ್ಲಿಕೇಷನ್‌ಗೆ ಹಣ ಪಡೆದರೆ ಕ್ರಮ – ಡಿಕೆಶಿ ಎಚ್ಚರಿಕೆ

ಬೆಂಗಳೂರು; ಗ್ಯಾರೆಂಟಿ ಯೋಜನೆಗಳನ್ನು ಪಡೆಯಲು ಆನ್‌ಲೈನ್‌ ಹಾಗೂ ಆಫ್‌ಲೈನ್‌ನಲ್ಲಿ ರಿಜಿಸ್ಟರ್‌ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಕೆಲವು ಕಡೆ ಆನ್‌ಲೈನ್‌ ಅಪ್ಲಿಕೇಷನ್‌ ತುಂಬಲು ಜನರಿಂದ ಹಣ ಪಡೆಯುತ್ತಿರುವ ಬಗ್ಗೆ ದೂರು ಬಂದಿದೆ. ಹೀಗಾಗಿ ಹಣ ಪಡೆಯುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಅಂತಹವರ ಏಜೆನ್ಸಿಯನ್ನು ರದ್ದು ಮಾಡಲಾಗುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಗ್ಯಾರೆಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ವಿಧಾನವನ್ನು ಇನ್ನೂ ಸಾಕಷ್ಟು ಸರಳ ಮಾಡಲಾಗುತ್ತಿದೆ ಎಂದು ಹೇಳಿದರು.

ಎಲ್ಲರೂ ಮೊಬೈಲ್‌ನಲ್ಲಿ ಕೂಡಾ ಅರ್ಜಿ ಸಲ್ಲಿಕೆ ಮಾಡಬಹುದು. ಇನ್ನು ಕರ್ನಾಟಕ ಒನ್‌, ಬೆಂಗಳೂರು ವನ್‌ ಹಾಗೂ ಗ್ರಾಮ ವನ್‌ ಕೇಂದ್ರಗಳಲ್ಲಿ ಕೂಡಾ ಅರ್ಜಿ ಸಲ್ಲಿಸಬಹುದು. ಇಲ್ಲಿ ಅವರಿಗೆ ಒಂದು ಅರ್ಜಿ 22 ರೂಪಾಯಿ ಸರ್ಕಾರದಿಂದಲೇ ಕೊಡುತ್ತಿದ್ದೇವೆ. ಹೀಗಾಗಿ ಜನರು ಅರ್ಜಿಗೆ ಹಣ ನೀಡಬೇಕಿಲ್ಲ. ಒಂದು ವೇಳೆ ಯಾರಾದರೂ ಹಣ ಕೇಳಿದರೆ ದೂರು ನೀಡಬಹುದು. ಅಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ನಾವು ಲಂಚ ಮುಕ್ತ ರಾಜ್ಯ ಮಾಡಲು ಹೊರಟಿದ್ದೇವೆ. ಹೀಗಾಗಿ ಲಂಚ ಪಡೆಯುವವರ ವಿರುದ್ಧ ಸಾರ್ವಜನಿಕರು ಕೂಡಾ ನಿಲ್ಲಬೇಕು. ಯಾವುದೇ ಕಾರಣಕ್ಕೂ ಲಂಚ ನೀಡಬಾರದು. ಲಂಚ ಪಡೆಯುವವರ ವಿರುದ್ಧ ದೂರು ಸಲ್ಲಿಸಲು ಟೋಲ್‌ ನಂಬರ್‌ ಕೂಡಾ ನೀಡಲಾಗುತ್ತದೆ ಎಂದು ಡಿ.ಕೆ.ಶಿವಕುಮಾರ್‌ ಇದೇ ವೇಳೆ ತಿಳಿಸಿದರು.

 

Share Post