BengaluruCinema

ನಾನು ಮೋದಿ ಭಕ್ತ, ಹೇಳೋದಕ್ಕೆ ಸಂಕೋಚವಿಲ್ಲ; ನಟ ಅನಂತ್‌ನಾಗ್‌

ಬೆಂಗಳೂರು; ನಾನು ಪ್ರಧಾನಿ ನರೇಂದ್ರ ಮೋದಿ ಭಕ್ತ. ಅದನ್ನು ಬಹಿರಂಗವಾಗಿ ಹೇಳಿಕೊಳ್ಳುವುದಕ್ಕೆ ನನಗೆ ಯಾವುದೇ ಸಂಕೋಚವಿಲ್ಲ ಎಂದು ಹಿರಿಯ ನಟ ಅನಂತ್‌ ನಾಗ್‌ ಹೇಳಿದ್ದಾರೆ. ಮಾಧ್ಯಮ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮೋದಿ ಒಂದು ದಿನವೂ ರಜೆ ತೆಗೆದುಕೊಳ್ಳದೆ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸಗಳಿಗೆ ನಾನು ಮನಸೋತಿದ್ದು, ನಾನು ಅವರ ಭಕ್ತ ಎಂದು ಹೇಳಿದ್ದಾರೆ. 

ರಾಷ್ಟ್ರ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ವಿಷಯವಾಗಿ  ಅನಂತ್ ನಾಗ್ ಮಾತನಾಡಿದರು. ನಾನು ಮಾತನಾಡುವ ವಿಷಯ ಕೊಟ್ಟಾಗ ನಾನು ಯೋಚಿಸಿದೆ. ಇದ್ಯಾವುದು ಮೋದಿ ತಂದಿರುವ ಹೊಸ ಕಾರ್ಯಕ್ರಮವಾ ಎಂದುಕೊಂಡೆ ಎಂದರು.

 

Share Post