ಹೋರಾಟಗಾರರ ಬಂಧನ ಹಿನ್ನೆಲೆ; ಸರ್ಕಾರದ ಕಿಡಿಗೇಡಿತನ ಎಂದ ಹೆಚ್ಡಿಕೆ
ಬೆಂಗಳೂರು; ಕಾವೇರಿಗಾಗಿ ರೈತರು, ಕನ್ನಡ ಪರ ಸಂಘಟನೆಗಳು ಬೆಂಗಳೂರು ಬಂದ್ಗೆ ಕರೆ ನೀಡಿವೆ. ಆದ್ರೆ ಪೊಲೀಸರು ಹೋರಾಟಗಾರರನ್ನು ರಾತ್ರೋ ರಾತ್ರಿ ಬಂಧಿಸಿವೆ. ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ಕಿಡಿಗೇಡಿತನ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಹೋರಾಟಗಾರರನ್ನು ಬಂಧಿಸಿ, ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ.
ಮೇಕೆದಾಟು ಬೇಕು ಎಂದು ಹೋರಾಟ ಮಾಡಿದವರು ಈಗ ಕಾವೇರಿ ಹೋರಾಟಗಾರರನ್ನು ಬಂಧಿಸುತ್ತಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಕಿಡಿಗೇಡಿತನದ ಪರಮಾವಧಿ. ಕಾಂಗ್ರೆಸ್ ಪಕ್ಷಕ್ಕೆ ಒಂದು ನ್ಯಾಯ, ಕನ್ನಡಿಗರಿಗೆ ಒಂದು ನ್ಯಾಯ ಅನ್ನೋದಿದೆಯಾ ಇಲ್ಲಿ ಎಂದು ಹೆಚ್ಡಿಕೆ ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ