ಬಾಯ್‌ಫ್ರೆಂಡ್ ಜೊತೆ ಮನೆಯಲ್ಲೇ ಚಕ್ಕಂದ!; ಪ್ರಶ್ನಿಸಿದ ತಾಯಿಯ ಮರ್ಡರ್!
ಬೆಂಗಳೂರು; ಪ್ರಿಯಕರನನ್ನು ಮನೆಗೇ ಕರೆಸಿಕೊಂಡು ಹಾಸಿಗೆ ಹಂಚಿಕೊಂಡಿದ್ದ ವಿವಾಹಿತ ಮಹಿಳೆಯನ್ನು ಆಕೆಯ ತಾಯಿ ದಂಡಿಸಿದ್ದಾಳೆ.. ಇದರಿಂದ ಕೆರಳಿದ ಆಕೆ ಸ್ವಂತ ತಾಯಿಯನ್ನೇ ಕೊಂದು ಮುಗಿಸಿ, ಬಾತ್‌ರೂಮ್‌ನಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆಂದು ನಾಟಕ ಕಟ್ಟಿದ್ದಾಳೆ.. ಆದ್ರೆ, ಪೊಲೀಸರು ಕೊಲೆ ರಹಸ್ಯವನ್ನು ಬಯಲು ಮಾಡಿದ್ದಾರೆ..
ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಂಗಸಂದ್ರ ಬಳಿ ಈ ಕೃತ್ಯ ಎಸಗಲಾಗಿದೆ.. ಇಲ್ಲಿ ದಿನಸಿ ಅಂಗಡಿ ನಡೆಸುವ 46 ವರ್ಷದ ಜಯಲಕ್ಷ್ಮೀ ಎಂಬಾಕೆಯೇ ಮಗಳಿಂದಲೇ ಕೊಲೆಯಾದವರು. ಜಯಲಕ್ಷ್ಮೀ ಮಗಳು ಪವಿತ್ರಾಗೆ ಈಗಾಗಲೇ ಮದುವೆಯಾಗಿದೆ.. ಆದರೂ ಕೂಡಾ ಆಕೆ ತನ್ನ ಪ್ರಿಯಕರ ಲವಲೀಶ್ ಜೊತೆ ಸಂಪರ್ಕ ಹೊಂದಿದ್ದಳು.. ಎರಡು ದಿನದ ಹಿಂದೆ ತಾಯಿ ಮನೆಯಿಂದ ಹೊರಗೆ ಹೋಗಿದ್ದಾಗ, ಪವಿತ್ರಾ ತನ್ನ ಪ್ರಿಯಕರನನ್ನು ಮನೆಗೇ ಕರೆಸಿಕೊಂಡಿದ್ದಳು.. ಈ ವೇಳೆ ತಾಯಿಗೆ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಳು..
ಈ ವೇಳೆ ತಾಯಿ ಜಯಲಕ್ಷ್ಮೀ ಮಗಳು ಪವಿತ್ರಾ ಜೊತೆ ಜಗಳ ಕಾಯ್ದಿದ್ದಾರೆ.. ಮದುವೆಯಾಗಿದ್ದರೂ ಬಾಯ್‌ಫ್ರೆಂಡ್ ಜೊತೆ ಸಂಬಂಧ ಇಟ್ಟುಕೊಂಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಆಗ ಬಾಯ್‌ಫ್ರೆಂಡ್ ಜೊತೆ ಸೇರಿ ಪವಿತ್ರಾ ತನ್ನ ತಾಯಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.. ಅನಂತರ ಪೊಲೀಸರ ಮುಂದೆ ತನ್ನ ತಾಯಿ ಬಚ್ಚಲು ಮನೆಯಲ್ಲಿ ಜಾರಿಬಿದ್ದು ಸಾವನ್ನಪ್ಪಿದ್ದಾರೆ ಎಂದು ಕಥೆ ಕಟ್ಟಿದ್ದಾಳೆ.. ಆದ್ರೆ ಮರಣೋತ್ತರ ಪರೀಕ್ಷೆಯಲ್ಲಿ ಇದು ಕೊಲೆ ಅನ್ನೋದು ಸಾಬೀತಾಗಿದೆ.. ಪವಿತ್ರಾಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ನಿಜ ವಿಷಯ ಬಯಲಾಗಿದೆ.. ಇದೀಗ ಬೊಮ್ಮನಹಳ್ಳಿ ಪೊಲೀಸರು ಆರೋಪಿಗಳಾದ ಪವಿತ್ರಾ ಹಾಗೂ ಪ್ರಿಯಕರ ಲವಲೀಶ್ ನನ್ನು ಬಂಧಿಸಿದ್ದಾರೆ..