ಕೊರೊನಾ ಆತಂಕ: ಆರ್ಕಿಡ್ ಶಿಕ್ಷಣ ಸಂಸ್ಥೆಗಳಿಗೆ ಬೀಗ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಭೀತಿ ಶುರುವಾಗಿದೆ. ಗಣನೀಯವಾಗಿ ಏರುತ್ತಿರುವ ಕೊರೊನಾ, ಓಮಿಕ್ರಾನ್ ಸೋಂಕಿನ ಆತಂಕದಿಂದ ತಮ್ಮ ಸಂಸ್ಥೆಗಳಿಗೆ ಬೀಗ ಹಾಕಲು ಆರ್ಕಿಡ್ ಅಂತರಾಷ್ಟ್ರೀಯ ಶಿಕ್ಷಣ ಸಂಸ್ಥೆ ನಿರ್ಧರಿಸಿದೆ. ಇಂದಿನಿಂದಲೇ ಮಕ್ಕಳಿಗೆ ರಜೆ ನೀಡಲಾಗಿದ್ದು ಆನ್ಲೈನ್ ತರಗತಿಗೆ ಅನುಮತಿ ನೀಡಿದೆ. ವ್ಯಾಪಕವಾಗಿ ಕೊರೊನಾ ಹರಡುವಿಕೆ ಹಾಗೂ ಮೂರನೇ ಅಲೆ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ ಎಂಬ ತಜ್ಞರ ಹೇಳಿಕೆಗಳಿಂದ ಭಯಗೊಂಡಿರುವ ಪೋಷಕರು ಶಾಲೆ ಬಂಸದ್ ಮಾಡುವಂತೆ ಮನವಿ ಮಾಡಿದ್ರು.
ಪೋಷಕರ ಮನವಿಗೆ ಮಣಿದು ಆರ್ಕಿಡ್ ಇಂಟರ್ನ್ಯಾಷನಲ್ ಶಿಕ್ಷಣ ಸಂಸ್ಥೆ ಬೆಂಗಳೂರಿನಲ್ಲಿ 16ಶಾಲೆಗಳನ್ನು ಬಂದ್ ಮಾಡುವಂತೆ ಆಡಳಿತ ಮಂಡಳಿಗೆ ಸೂಚಿಸಿದೆ. ಅಲ್ಲದೆ ಆನ್ಲೈನ್ ತರಗತಿಗಳನ್ನು ಪ್ರಾರಂಭ ಮಾಡಲು ತಯಾರಿ ನಡೆಸಿದೆ. ಇಡೀ ಭಾರತದಾದ್ಯಂತ 48 ಆರ್ಕಿಡ್ ಇಂಟರ್ನ್ಯಾಷನಲ್ ಶಾಲೆಗಳಿವೆ.
ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ೧ ರಿಂದ ೯ನೇ ತರಗತಿವರೆಗಿನ ಶಾಲೆಗಳನ್ನು ಬಂದ್ ಮಾಡಿವೆ. ಇಂದು ಕರ್ನಾಟಕದಲ್ಲೂ ಕೂಡ ಸಿಎಂ ನೇತೃತ್ವದ ಸಭೆಯಲ್ಲಿ ತಜ್ಞರ ಸಲಹೆ ಮೇರೆಗೆ ಕೊರೊನಾ ಸಂಬಂಧ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು.