BengaluruCrime

ನಮ್ಮ ಮೆಟ್ರೋದಿಂದ ಮತ್ತೊಂದು ಅವಾಂತರ?; ಕಾರಿನ ಮೇಲೆ ಬಿದ್ದ ಕಬ್ಬಿಣದ ಪೀಸ್‌

ಬೆಂಗಳೂರು; ಮೆಟ್ರೋದಿಂದ ಹಲವಾರು ಅವಘಡಗಳು ನಡೆದಿವೆ. ಇತ್ತೀಚೆಗಷ್ಟೇ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ ಕುಸಿದು ತಾಯಿ-ಮಗು ಸಾವನ್ನಪ್ಪಿದ್ದರು. ಅದರ ನಂತರವೂ ಒಂದಷ್ಟು ಅವಘಡಗಳು ನಡೆದಿದ್ದವು. ಇದೀಗ ಮತ್ತೆ ಒಂದು ದುರ್ಘಟನೆ ನಡೆದಿದ್ದು, ಅನಾಹುತ ತಪ್ಪಿದೆ.

ಮೆಟ್ರೋ ಪಿಲ್ಲರ್‌ನಿಂದ ಜಾರಿಬಿದ್ದ ಕಬ್ಬಿಣದ ತುಂಡೊಂದು ಕಾರಿನ ಗಾಜಿನ ಮೇಲೆ ಬಿದ್ದಿದೆ. ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮೇಟ್ರೋ ಸ್ಟೇಷನ್ ಕೆಳಗೆ ಈ ಘಟನೆ ನಡೆದಿದೆ. ಕಾರಿನ ಗಾಜು ಪೀಸ್‌ ಆಗಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ರಿತೇಶ್ ಎಂಬವವರಿಗೆ ಸೇರಿದ ಕಾರು ಇದಾಗಿದೆ. ಈ ಬಗ್ಗೆ ರಿತೇಶ್‌ ಪೊಲೀಸರಿಗೆ ದೂರು ನೀಡಿದ್ದಾರೆ. ಅಧಿಕಾರಿಗಳು ಈ ಕಬ್ಬಿಣದ ಪೀಸ್‌ ಎಲ್ಲಿಂದ ಬಂತು ಎಂಬುದರ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಇನ್ನೊಂದೆಡೆ ಪ್ರತಿಕ್ರಿಯೆ ನೀಡಿರುವ ಮೆಟ್ರೋ ಅಧಿಕಾರಿಯೊಬ್ಬರು, ಘಟನೆಗೂ ಮೆಟ್ರೋಗೂ ಯಾವುದೇ ಸಂಬಂಧವಿಲ್ಲ. ನಾವು ಇಲ್ಲಿ ಯಾವುದೇ ಕಾಮಗಾರಿ ನಡೆಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Share Post