ಬೆಂಗಳೂರಿನಲ್ಲಿ ಡೆಂಘಿಗೆ 11 ವರ್ಷದ ಬಾಲಕ ಬಲಿ!; ಹೆಚ್ಚಿದ ಆತಂಕ!
ಬೆಂಗಳೂರು; ಬೆಂಗಳೂರಿನಲ್ಲೂ ಡೆಂಘೀ ಹಾವಳಿ ಹೆಚ್ಚಾಗುತ್ತಿದೆ.. ಇಂದು ಬೆಂಗಳೂರಿನಲ್ಲಿ 11 ವರ್ಷದ ಬಾಲಕನೊಬ್ಬ ಡೆಂಘಿಗೆ ಬಲಿಯಾಗಿದ್ದಾನೆ.. ಅಂಜನಾಪುರದ ಗಗನ್ (11) ಎಂಬಾತನೇ ಡೆಂಘೀ ಜ್ವರದಿಂದಾಗಿ ಸಾವನ್ನಪ್ಪಿದ ಬಾಲಕನಾಗಿದ್ದಾನೆ..
ಜಂಬೂಸವಾರಿ ದಿಣ್ಣೆಯ ಚೈತನ್ಯ ಟೆಕ್ನೋ ಶಾಲೆಯಲ್ಲಿ ಓದುತ್ತಿದ್ದ ಗಗನ್ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ.. ಹೀಗಾಗಿ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.. ಈ ವೇಳೆ ಆತನಿಗೆ ಡೆಂಘಿ ಅಟ್ಯಾಕ್ ಆಗಿರುವುದು ದೃಢಪಟ್ಟಿತ್ತು.. ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಗಗನ್, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ..