Bengaluru

ರಾತ್ರಿಯಿಡೀ ಬೆಂಗಳೂರಲ್ಲಿ ಮಳೆ ಅಬ್ಬರ; ಜನ ಜೀವನ ಅಸ್ತವ್ಯಸ್ತ

ಬೆಂಗಳೂರು; ಬೆಂಗಳೂರಿನಲ್ಲಿ ಕಳೆದ ರಾತ್ರಿ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹಲವಾರು ಕಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.  92 ವಾರ್ಡ್‍ಗಳಲ್ಲಿ ದಾಖಲೆ ಪ್ರಮಾಣದ ಮಳೆ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂದೇ ರಾತ್ರಿಯಲ್ಲಿ ಬೆಂಗಳೂರಿನ 8 ವಲಯಗಳಲ್ಲಿ ವರುಣ ದಾಖಲೆ ಮಟ್ಟದಲ್ಲಿ ಅಬ್ಬರಿಸಿದ್ದಾನೆ. ಯಲಹಂಕ ವಲಯದಲ್ಲಿ 75.5 ಮಿ.ಮೀ, ಅಟ್ಟೂರು ಭಾಗದಲ್ಲಿ 70 ಮಿ.ಮೀ, ಚೌಡೇಶ್ವರಿ ವಾರ್ಡ್ ನಲ್ಲಿ 67.5 ಮಿ.ಮೀ ಹಾಗೂ ಆರ್.ಆರ್.ನಗರದಲ್ಲಿ 66.5 ಮಿ.ಮೀ, ಸಂಪಗಿರಾಮನಗರದಲ್ಲಿ 66 ಮಿ.ಮೀ ಮಳೆ ಪ್ರಮಾಣ ದಾಖಲಾಗಿದೆ.

 

Share Post