ತೆಲುಗಿನ ಖ್ಯಾತ ನಟ ರಾಮ್‌ಚರಣ್‌ಗೆ ಹೆಣ್ಣು ಮಗು; ಮಹಾಲಕ್ಷ್ಮೀ ಬಂದಳು ಎಂದ ಮೆಗಾಸ್ಟಾರ್
ಬೆಂಗಳೂರು; ತೆಲುಗಿನ ಖ್ಯಾತ ನಟ ರಾಮ್‌ಚರಣ್ ಹಾಗೂ ಉಪಾಸನಾ ದಂಪತಿಗೆ ಹೆಣ್ಣು ಮಗುವಾಗಿದ್ದು, ಮೆಗಾಸ್ಟಾರ್ ಕುಟುಂಬದಲ್ಲಿ ಸಂಬ್ರಮ ಮನೆ ಮಾಡಿದೆ. ನಮ್ಮ ಕುಟುಂಬಕ್ಕೆ ಮಹಾಲಕ್ಷ್ಮೀಯ ಆಗಮನವಾಗಿದೆ ಎಂದು ಮೆಗಾಸ್ಟಾರ್ ಚಿರಂಜೀವಿ ಹೇಳಿಕೊಂಡಿದ್ದಾರೆ. ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.
ಹೈದರಾಬಾದ್ ನ ಜುಬ್ಲಿ ಹಿಲ್ಸ್ ಅಪೋಲೊ ಆಸ್ಪತ್ರೆಯಲ್ಲಿ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಎಲ್ಲಾ ಉಹಾಪೋಹಗಳಿಗೂ ತೆರೆ ಎಳೆಯಲಾಗಿದೆ. ಅಮೆರಿಕದಲ್ಲಿ ಮೊದಲ ಮಗುವಿನ ಜನನವಾಗುತ್ತದೆ ಎಂದು ಸುದ್ದಿ ಹಬ್ಬಿತ್ತು. ಉಪಾಸನಾ ಅವರ ಸಲಹೆ ಮೇರೆಗೆ ರಾಮ್ ಚರಣ್ ಅಮೆರಿಕದಲ್ಲಿ ಡೆಲಿವರಿ ಮಾಡಿಸಲು ಸಿದ್ಧರಾಗಿದ್ದಾರೆ ಎಂಬ ಸುದ್ದಿ ಹರಡಿತ್ತು. ಆದ್ರೆ, ಅದೆಲ್ಲವೂ ಸುಳ್ಳಾಗಿದ್ದು, ಉಪಾಸನಾ ಹೈದರಾಬಾದ್‌ನಲ್ಲೇ ಮಗುವಿಗೆ ಜನ್ಮವಿತ್ತಿದ್ದಾರೆ.