BengaluruCinemaCrime

ಗಡಿಪಾರಾಗುವುದರಿಂದ ನಟ ಚೇತನ್‌ ಪಾರು

ಬೆಂಗಳೂರು; ಒಸಿಐ ಮಾನ್ಯತೆಯನ್ನು ಕೇಂದ್ರ ಸರ್ಕಾರ ರದ್ದು ಮಾಡಿದ್ದರಿಂದಾಗಿ ನಟ ಚೇತನ್‌ ಭಾರತದಿಂದ ಗಡಿಪಾರಾಗುವ ಭೀತಿ ಎದುರಿಸುತ್ತಿದ್ದರು. ಆದ್ರೆ, ಹೈಕೋರ್ಟ್‌ ಚೇತನ್‌ ಅವರಿಗೆ ಷರತ್ತುಬದ್ಧ ರಿಲೀಫ್‌ ನೀಡಿದೆ.

ನಟ ಚೇತನ್‌ ಪೋಷಕರು ಭಾರತೀಯರು. ಆದ್ರೆ ಚೇತನ್‌ ಹುಟ್ಟಿದ್ದು ಅಮೆರಿಕದಲ್ಲಿ. ಹೀಗಾಗಿ ಅವರು ಅಮೆರಿಕ ಪೌರತ್ವ ಹೊಂದಿದ್ದಾರೆ. 2018ರಲ್ಲಿ ನಟ ಚೇತನ್‌ಗೆ ಓವರ್‌ ಸೀಸ್‌ ಸಿಟಿಜನ್‌ ಆಫ್‌ ಇಂಡಿಯಾ ಕಾರ್ಡ್‌ ನ್ನು ಕೇಂದ್ರ ಸರ್ಕಾರ ನೀಡಿತ್ತು.

ಆದ್ರೆ ನಟ ಚೇತನ್‌ ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಆಗಿದ್ದು, ಹಲವು ಪೋಸ್ಟ್‌ಗಳನ್ನು ಹಾಕುತ್ತಿರುತ್ತಾರೆ. ಇದರಿಂದ ಸಮುದಾಯಗಳ ನಡುವೆ ದ್ವೇಷ ಬಿತ್ತು ಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಚೇತನ್‌ಗೆ ನೋಟಿಸ್‌ ನೀಡಿತ್ತು. ಆದ್ರೆ ಇದಕ್ಕೆ ಚೇತನ್‌ ಸೂಕ್ತ ಉತ್ತರ ನೀಡಿಲ್ಲ ಎಂದು ಕೇಂದ್ರ ಸರ್ಕಾರ, ಒಸಿಐ ಮಾನ್ಯತೆಯನ್ನು ರದ್ದು ಮಾಡಿತ್ತು.

ಆದರೆ ಚೇತನ್ ಪರ ವಕೀಲರು, ಹೈಕೋರ್ಟ್‌ನಲ್ಲಿ ಕೇಂದ್ರ ಸರ್ಕಾರ ಕ್ರಮದ ವಿರುದ್ಧ ವಾದಿಸಿದರು. ಚೇತನ್‌ ವಾದ ಆಲಿಸದೇ ಕ್ರಮ ಕೈಗೊಳ್ಳಲಾಗಿದೆ ಎಂದು ವಾದಿಸಿದ್ದಾರೆ. ನಂತರ ಕೋರ್ಟ್‌ ಜೂನ್‌ 2ರವೆರಗೆ ಯಾವುದೇ ಕ್ರಮ ಬೇಡ ಎಂದು ಆದೇಶ ನೀಡಿದೆ. ಇನ್ನು ನ್ಯಾಯಾಂಗದ ಬಗ್ಗೆ ಟ್ವೀಟ್‌ ಮಾಡುವಂತಿಲ್ಲ ಎಂದು ಚೇತನ್‌ಗೆ ಷರತ್ತು ವಿಧಿಸಲಾಗಿದೆ.

 

Share Post