BengaluruCrime

ಬೆಳ್ಳಂಬೆಳಗ್ಗೆ ಎಸಿಬಿ ಶಾಕ್; ಜಮೀರ್ ಅಹ್ಮದ್ ಆಸ್ತಿಗಳ ಮೇಲೆ ರೇಡ್

ಬೆಂಗಳೂರು; ಶಾಸಕ ಜಮೀರ್ ಅಹಮದ್ ಖಾನ್ ಮನೆ ಹಾಗೂ ಅವರ ಐದು ಆಸ್ತಿಗಳ ಮೇಲೆ ಎಸಿಬಿ ದಾಳಿ ನಡೆಸಿದೆ. ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ರೇಡ್​ ಮಾಡಲಾಗಿದೆ.

ಸರ್ಚ್ ವಾರಂಟ್ ಪಡೆದು ಎಸಿಬಿ ತಂಡ ದಾಳಿ ಮಾಡಿದೆ. 50 ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದಾರೆ. ಇಡಿ ಹಾಗು ಐಟಿ ಇಲಾಖೆಯಿಂದ ಮಾಹಿತಿ ಪಡೆದಿದ್ದ ಎಸಿಬಿ SP ಯತೀಶ್ ಚಂದ್ರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಕಂಟೋನ್ಮೆಂಟ್ ಬಳಿ ಇರುವ ಜಮೀರ್ ಅಹ್ಮದ್ ಮನೆ, ಸಿಲ್ವರ್ ಓಕ್ ಅಪಾರ್ಟ್ಮೆಂಟ್, ಸದಾಶಿವನಗರ ಗೆಸ್ಟ್ ಹೌಸ್, ಬನಶಂಕರಿಯ ಜಿಕೆ ಅಸೋಸಿಯೇಟ್ ಕಚೇರಿ ಹಾಗೂ ಕಲಾಸಿಪಾಳ್ಯದ ನ್ಯಾಷನಲ್ ಟ್ರಾವೆಲ್ಸ್ ಕಚೇರಿಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ.

Share Post