BengaluruCrime

ಸಂಚಾರಿ ನಿಮಯ ಉಲ್ಲಂಘಿಸಿದ ಮಹಿಳಾ ಪೇದೆಗಳಿಗೆ ಮಹಿಳೆ ಕ್ಲಾಸ್‌

ಬೆಂಗಳೂರು; ಸಂಚಾರಿ ನಿಯಮ ಉಲ್ಲಂಘಿಸಿದರೆ ಪೊಲೀಸರು ಫೈನ್‌ ಹಾಕುತ್ತಾರೆ. ಆದ್ರೆ ಪೊಲೀಸರೇ ತಪ್ಪು ಮಾಡಿದರೆ ಅದನ್ನು ಕೇಳೋರು ಯಾರು..? ಹೌದು, ಮೂವರು ಮಹಿಳಾ ಪೇದೆಗಳು ಒಂದೇ ಸ್ಕೂಟರ್‌ನಲ್ಲಿ ಪ್ರಯಾಣ ಮಾಡುತ್ತಿದ್ದುದನ್ನು ನೋಡಿ ಮಹಿಳೆಯೊಬ್ಬರು ಪ್ರಶ್ನೆ ಮಾಡಿದ್ದಾರೆ. ಮೂವರು ಹೆಲ್ಮೆಟ್‌ ಕೂಡಾ ಹಾಕದೇ ಪ್ರಯಾಣ ಮಾಡುತ್ತಿದ್ದುದನ್ನು ಗಮನಿಸಿದ ಮಹಿಳೆ, ಪೊಲೀಸ್‌ ಪೇದೆಗಳಾಗಿ ನಿಮಗೆ ನಿಯಮ ಗೊತ್ತಿಲ್ವಾ ಎಂದು ಮಹಿಳೆ ಪ್ರಶ್ನೆ ಮಾಡಿದ್ದಾರೆ. ಇದ್ರಿಂದಾಗಿ ಇಬ್ಬರು ಮಹಿಳಾ ಪೇದೆಗಳು ಸ್ಕೂಟರ್‌ ಇಳಿದು ನಡೆದುಕೊಂಡು ಹೋಗಿದ್ದಾರೆ.

ಮತ್ತೊಂದು ಸ್ಕೂಟಿಯಲ್ಲಿ ಕೂಡಾ ಇಬ್ಬರು ಮಹಿಳಾ ಪೊಲೀಸ್‌ ಪೇದೆಗಳು ಹೆಲ್ಮೆಟ್‌ ಇಲ್ಲದೆ ಪ್ರಯಾಣಿಸುತ್ತಿರುವುದನ್ನು ನೋಡಿ ಮಹಿಳೆ ಪ್ರಶ್ನೆ ಮಾಡಿದ್ದಾರೆ. ಈ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಎಲ್ಲೆಡೆ ವೈರಲ್‌ ಆಗುತ್ತಿವೆ.

Share Post