Bengaluru

ಪಠ್ಯಪುಸ್ತಕ ವಿವಾದ; ಮಧ್ಯಪ್ರವೇಶಕ್ಕೆ ಸಾಹಿತಿಗಳಿಂದ ಸಿಎಂಗೆ ಮನವಿ

ಬೆಂಗಳೂರು; ಶಾಲಾ ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಮಿತಿಯನ್ನು ಕೈಬಿಡುವಂತೆ ಒತ್ತಾಯಿಸಿ ಸಾಹಿತಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಸಾಹಿತಿಗಳಾದ ದೇವನೂರು ಮಹಾದೇವ, ಹಂಪ ನಾಗರಾಜಯ್ಯ ಅವರು ಸಿಎಂಗೆ ಪತ್ರ ಬರೆದಿದ್ದಾರೆ. ನನ್ನ ಪಠ್ಯ ಬಳಸಬೇಡಿ ಎಂದು ಸಾಹಿತಿ ದೇವನೂರು ಮಹಾದೇವ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹಳೆ ಪಠ್ಯವನ್ನೇ ಮುಂದುವರಿಸುವಂತೆ ಹಂಪ ನಾಗರಾಜಯ್ಯರಿಂದಲೂ ಸಿಎಂಗೆ ಪತ್ರ ಸಲ್ಲಿಕೆಯಾಗಿದೆ.
ಹೆಡಗೆವಾರ್ ಪಠ್ಯ ಸೇರ್ಪಡೆ ವಿಚಾರ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಕೆಲ ಸಾಹಿತಿಗಳು ಸಮರ ಸಾರಿದ್ದಾರೆ. ಇದು ಆರ್‌ಎಸ್‌ಎಸ್‌ ಪಠ್ಯಪುಸ್ತಕ ಎಂದು ಸಾಹಿತಿಗಳು ಗಂಭೀರ ಆರೋಪ ಮಾಡಿದ್ದಾರೆ. ಹೆಡಗೆವಾರ್ ಪಠ್ಯ ಕೈ ಬಿಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿದ್ದಾರೆ.

ಪಠ್ಯದಲ್ಲಿ ಕುವೆಂಪು ಅವರಿಗೆ ಅಪಮಾನ ಮಾಡಲಾಗಿದೆ ಅಂತ ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ರೋಹಿತ್ ಚಕ್ರತೀರ್ಥ ಸಮಿತಿ ಕುವೆಂಪು ಅವರಿಗೆ ಅಪಮಾನ ಮಾಡಿದೆ ಎಂದು ಸಾಹಿತಿಗಳು ಸಹ ದೂರಿದ್ದರು.

Share Post