BengaluruCrime

ಮುಕ್ತ ವಿವಿಯಲ್ಲಿ 300 ಕೋಟಿ ರೂ. ದುರ್ಬಳಕೆ; ಸಿಬಿಐ ಎಫ್‌ಐಆರ್‌ ದಾಖಲು

ನವದೆಹಲಿ; ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 300 ಕೋಟಿ ರೂಪಾಯಿ ನಿಧಿ ದುರ್ಬಳಕೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಎಫ್‌ಐಆರ್‌ ದಾಖಲು ಮಾಡಿದೆ. 

2009-10 ರಿಂದ 2012-13 ರಲ್ಲಿ ಕೆಎಸ್‌ಒಯು ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವ ಯೋಜನೆಯಡಿ 250 ಕೋಟಿ ರೂಪಾಯಿ ಹಾಗೂ 2013-14 ರಲ್ಲಿ 50 ಕೋಟಿ ರೂಪಾಯಿ ಅಕ್ರಮ ಎಸಗಿರುವುದು ಲೆಕ್ಕ ಪರಿಶೋಧನೆ ಸಮಯದಲ್ಲಿ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ

ವಿವಿ ಸಹಭಾಗಿತ್ವದ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಂದ ದಾಖಲಾತಿ, ಪರೀಕ್ಷೆ, ಅಧ್ಯಯನ ಕೇಂದ್ರ ಸ್ಥಾಪನೆ ಸೇರಿದಂತೆ ಇತರ ವಿಚಾರಗಳಿಗಾಗಿ ಕೋಟ್ಯಂತರ ರೂಪಾಯಿ ಹಣ ಸಂಗ್ರಹ ಮಾಡಿವೆ. ಈ ಹಣವನ್ನು ಸಹಭಾಗಿತ್ವದ ಸಂಸ್ಥೆಗಳು ಮುಕ್ತ ವಿವಿಗೆ ಜಮೆ ಮಾಡಬೇಕಿತ್ತು. ಆದ್ರೆ ಇದರಲ್ಲಿ ವ್ಯತ್ಯಾಸ ಕಂಡುಬಂದಿದೆ.

ರಾಜ್ಯ ಸರ್ಕಾರ ಮಾರ್ಚ್‌ 13ರಂದು ಈ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಿತ್ತು. ಇದೀಗ ಸಿಬಿಐ ಎಫ್‌ಐಆರ್‌ ದಾಖಲು ಮಾಡಿಕೊಂಡು ತನಿಖೆ ಶುರು ಮಾಡಿದೆ.

Share Post