NationalPolitics

ಭಾನುವಾರ ಪಂಚರಾಜ್ಯಗಳ ಚುನಾವಣೆ ದಿನಾಂಕ ಘೋಷಣೆ ಸಾಧ್ಯತೆ

ನವದೆಹಲಿ; ಲೋಕಸಭಾ ಚುನಾವಣೆಗೂ ಮುಂಚೆ ಐದು ರಾಜ್ಯಗಳಿಗೆ ಚುನಾವಣೆ ನಡೆಯಬೇಕಿದೆ. ಅದಕ್ಕಾಗಿ ಈಗಾಗಲೇ ಎಲ್ಲಾ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸಿವೆ. ಈ ಚುನಾವಣೆಗೆ ದಿನಾಂಕ ಘೋಷಣೆಯಾಗಬೇಕಿದೆ. ಕೇಂದ್ರ ಚುನಾವಣಾ ಆಯೋಗ ಇದೇ ಭಾನುವಾರದಂದು ಪಂಚರಾಜ್ಯಗಳ ಚುನಾವಣೆಯ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ.

ಚುನಾವಣೆ ನಡೆಯಬೇಕಿರುವ ರಾಜ್ಯಗಳು

೧. ರಾಜಸ್ಥಾನ

೨. ಮಧ್ಯಪ್ರದೇಶ

೩. ತೆಲಂಗಾಣ

೪. ಮಿಜೋರಾಂ

೫. ಛತ್ತಿಸ್‌ಗಢ್‌

ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ ಹಾಗೂ ಮೀಜೋರಾಂ ರಾಜ್ಯದಲ್ಲಿ ಒಂದೇ ಹಂತದಲ್ಲಿ, ಛತ್ತೀಸಗಢ್​ದಲ್ಲಿ ಎರಡು ಹಂತದ ಮತದಾನ ನಡೆಯುವ ಸಾಧ್ಯತೆ ಇದೆ.

Share Post