ಬಿಎಂಟಿಸಿ ನೌಕರರ ಗಳಿಕೆ ರಜೆ ಮರುಪಾವತಿಗೆ 200ಕೋಟಿ ಬಿಡುಗಡೆ
ಬೆಂಗಳೂರು: ಬಿಎಂಟಿಸಿ ನೌಕರರಿಗೆ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಇದುವರೆಗೂ ಬಾಕಿಯಿದ್ದ ಎಲ್ಲಾ ಅನುದಾನವನ್ನು ನೀಡಲು ಸರ್ಕಾರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 200ಕೋಟಿ ರೂಪಾಯಿಯನ್ನು ನೀಡಿದೆ. ಮರಣ ಹೊಂದಿದ ಬಿಎಂಟಿಸಿ ನೌಕರರ ಗಳಿಕೆ ರಜೆ ಮರುಪಾವತಿ, ಬಾಕಿ ಬಿಲ್ ಪಾವತಿ ಮಾಡಲು 200ಕೋಟಿ ರೂಪಾಯಿಗಳನ್ನು ನೀಡಿದೆ. ಈ ಬಗ್ಗೆ ಸಾರಿಗೆ ಸಚಿವ ಶ್ರೀರಾಮುಲು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ @BMTC_BENGALURU ನೌಕರರ ಭವಿಷ್ಯನಿಧಿ , ಉಪಧನ, ನಿವೃತ್ತ/ಮರಣ ಹೊಂದಿದ ನೌಕರರ ಗಳಿಕೆ ರಜೆ ಮರುಪಾವತಿ ಹಾಗೂ ಪೂರೈಕೆದಾರರ ಬಿಲ್ಲುಗಳ ಹಳೆಯ ಬಾಕಿ ತೀರುವಳಿ ಸಲುವಾಗಿ ರೂ. 20000.00 ಲಕ್ಷಗಳನ್ನು ( ಇಪ್ಪತ್ತು ಸಾವಿರ ಲಕ್ಷಗಳು ಮಾತ್ರ) ಈ ಕೆಳಕಂಡಂತೆ ಬಳಸಲು ಬಿಡುಗಡೆಗೊಳಿಸಿ ಆದೇಶಿಸಿದೆ.

— B Sriramulu (@sriramulubjp) February 9, 2022