16 ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ
ಬೆಂಗಳೂರು; ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯದಿಂದ ಒಂದೇ ಕಡೆ ಕಾರ್ಯನಿರ್ವಹಿಸುತ್ತಿದ್ದ ಹದಿನಾರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಲವು ಜಿಲ್ಲೆಗಳ ಎಸ್ಪಿಗಳು, ಎಎಸ್‌ಪಿಗಳನ್ನು ವರ್ಗಾವಣೆ ಮಾಡಲಾಗಿದೆ.
ಜೋಷಿ ಶ್ರೀನಾಥ್ ಮಹದೇವ್-ಎಸ್ಪಿ, ಲೋಕಾಯುಕ್ತ, ಕೆಂ.ಎಂ ಶಾಂತರಾಜ್-ಬೆಸ್ಕಾಂ, ಸಿ.ಕೆ ಬಾಬಾ-ಆಗ್ನೇಯ ವಿಭಾಗ ಡಿಸಿಪಿ, ಸಂಜೀವ್ ಪಾಟೀಲ್-ಬೆಳಗಾಂ ಎಸ್ಪಿ, ಕಲಾ ಕೃಷ್ಣಸ್ವಾಮಿ-ಪೂರ್ವ ಸಂಚಾರಿ ವಿಭಾಗ ಡಿಸಿಪಿ, ಹರೀಶ್ ಪಾಂಡೇ- ಎಸ್ಪಿ, ಎಸಿಬಿ, ಲಕ್ಷ್ಮಣ್ ಹಿಂಬರಗಿ- ಬೆಂಗಳೂರಿ ಪಶ್ಚಿಮ ವಿಭಾಗ ಡಿಸಿಪಿ, ನಾಗೇಶ್ ಡಿ.ಎಲ್-ಎಸ್ಪಿ, ಚಿಕ್ಕಬಳ್ಳಾಪುರ, ಶ್ರೀನಿವಾಸ್ ಗೌಡ-ಕೇಂದ್ರ ವಿಭಾಗ ಡಿಸಿಪಿ, ಸಿ.ಕೆ ಮಿಥುನ್ ಕುಮಾರ್- ಎಸ್ಪಿ, ಸಿಐಡಿ, ಪಿ. ಕೃಷ್ಣಕಾಂತ್- ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ, ಹರಿರಾಂ ಶಂಕರ್- ಎಸ್ಪಿ, ಹಾಸನ, ಜೈಪ್ರಕಾಶ್- ಎಸ್ಪಿ, ಬಾಗಲಕೋಟೆ, ಶೋಭಾರಾಣಿ – ಎಸ್ಪಿ, ಎಸಿಬಿ, ಶಿವಾಂಶು ರಾಜಪೂತ್-ಎಎಸ್ಪಿ ಹುಮ್ನಾಬಾದ್ ಉಪ ವಿಭಾಗಕ್ಕೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.