Astrology

ಮಂಗಳವಾರ ಆಂಜನೇಯನ ಪೂಜಿಸಿದರೆ ಸಾಲದಿಂದ ಮುಕ್ತಿ!

ಯಾರು ಏನೇ ಅಂದರೂ ಜೀವನಕ್ಕೆ ಬಹುಮುಖ್ಯವಾದುದು ಹಣ.. ಹಣ ಇದ್ದರೆ ಸುಖ, ನೆಮ್ಮದಿ ಇರುತ್ತದೆ. ಅದೇ ಸಾಲ ಮಾಡಿಕೊಂಡರೆ ಸುಖ, ನೆಮ್ಮದಿ ಹಾಳಾಗುತ್ತದೆ. ಬದುಕು ದುರ್ಬರವಾಗುತ್ತದೆ. ನಾವು ಸಾಲ ತೆಗೆದುಕೊಂಡರೂ ಸಮಸ್ಯೆಯೇ, ಸಾಲ ಕೊಟ್ಟರೂ ಸಮಸ್ಯೆಯೇ ಆಗಿರುತ್ತದೆ.. ಆದ್ರೆ ಅನಿವಾರ್ಯ ಕಾರಣಗಳಿಗಾಗಿ ನಾವು ಅಲ್ಲಿ ಇಲ್ಲಿ ಸಾಲ ತೆಗೆದುಕೊಂಡಿರುತ್ತೇವೆ. ಆ ಸಾಲ ತೀರಿಸಲು ಮತ್ತೊಂದು ಸಾಲ. ಹೀಗೆ ಸಾಲದ ಚಕ್ರದಲ್ಲಿ ಸಿಲುಕಿ ಒದ್ದಾಡುತ್ತಿರುತ್ತೇವೆ. ಅಂತಹವರು ಆಂಜನೇಯನನ್ನು ನಿಷ್ಠೆಯಿಂದ ಪೂಜಿಸುವುದರಿಂದ ಸಾಲದಿಂದ ಮುಕ್ತ ಪಡೆಯಬಹುದು. ಹೆಚ್ಚಿನ ಹಣ ಸಂಪಾದಿಸಬಹುದು. ಸಾಲ ತೀರಿಸಿ, ಹಣ ಸಂಪಾದಿಸುವ ಶಕ್ತಿಯನ್ನು ಹನುಮಂತ ನಮಗೆ ಕರುಣಿಸುತ್ತಾನೆ.

ಆಂಜನೇಯ ಪೂಜೆಯಿಂದ ಋಣಭಾರ ಮಾಯ;

ಆಂಜನೇಯ ಪೂಜೆಯಿಂದ ಋಣಭಾರ ಮಾಯ; ಆಂಜನೇಯ ಮಂಗಳ ದೇವರ ಅಧಿದೇವರು. ಹೀಗಾಗಿ ಆಂಜನೇಯನನ್ನು ತುಂಬಾ ಶ್ರದ್ಧೆಯಿಂದ ಭಕ್ತಿಯಿಂದ ಪೂಜೆ ಮಾಡಿದರೆ ನಮಗೆ ಹಣದ ಸಮಸ್ಯೆ ದೂರವಾಗುತ್ತದೆ. ಸಾಲ ತೀರಿಹೋಗುತ್ತದೆ. ಹನುಮಂತನ ಪೂಜೆಯಿಂದ ನಮಗೆ ಸಂಪಾದನೆಯ ದಾರಿಯನ್ನು ಆಂಜನೇಯ ತೋರಿಸುತ್ತಾನೆ.. ಎಲ್ಲಾ ಕೆಲಸಗಳೂ ಕೈಗೂಡುವಂತೆ ಮಾಡುತ್ತಾನೆ. ಇದರಿಂದಾಗಿ ಸಾಲ ತೀರಿಸಿ, ಹಣದ ಸಂಪಾದನೆ ಮಾಡಬಹುದು. ನೆಮ್ಮದಿಯಿಂದ ಇರಬಹುದು. ಅದಕ್ಕಾಗಿ ನಾವು ಏನು ಮಾಡಬೇಕು ಎಂಬುದನ್ನು ನೋಡಿ.

ಮಂಗಳವಾರದಂದು ಹೀಗೆ ಪೂಜೆ ಮಾಡಿ;

ಮಂಗಳವಾರದಂದು ಹೀಗೆ ಪೂಜೆ ಮಾಡಿ; ಆಂಜನೇಯನಿಗೆ ಮಂಗಳವಾರದಂದು ಪೂಜೆ ಮಾಡಿದರೆ ಸಾಲ ತೀರುತ್ತದೆ. ಆಂಜನೇಯ ನಮಗೆ ಸಾಲ ತೀರಿಸುವ ಶಕ್ತಿಯನ್ನು ಪ್ರಸಾದಿಸುತ್ತಾನೆ. ಆದ್ರೆ ಶ್ರದ್ಧೆಯಿಂದ ಪೂಜೆ ಮಾಡಬೇಕಿದೆ. ಸೋಮವಾರನೇ ಪೂಜಾ ಸಾಮಗ್ರಿಗಳನ್ನು ತಂದು ನಮ್ಮ ಮನೆಯ ಪೂಜಾ ಕೊಠಡಿಯಲ್ಲಿ ಇಡಬೇಕು. ಆಂಜನೇಯನ ಫೋಟೋ ಪೂಜಾ ಕೊಠಡಿಯಲ್ಲಿ ಇಲ್ಲದಿದ್ದರೆ ಒಂದು ಫೋಟೋ ಕೂಡಾ ತಂದುಕೊಳ್ಳಬೇಕು. ನಂತರ ಎಂಟು ವೀಳ್ಯದೆಲೆ ತರಬೇಕು. ಅವು ಎಲ್ಲೂ ಮುರಿದಿರಬಾರದು, ತೂತು ಆಗಿರಬಾರದು. ಆ ಎಂಟು ಎಲೆಗಳನ್ನು ದೇವರ ಮುಂದಿಟ್ಟು, ಅದರಲ್ಲಿ ಮೂರು ರೀತಿಯ ಕಾಳುಗಳು ಹಾಗೂ ತೆಂಗಿನ ಕಾಯಿಯನ್ನು ಇಡಬೇಕು.

ಪೂಜೆ ಈ ರೀತಿಯಲ್ಲಿ ಮಾಡಿ;

ಪೂಜೆ ಈ ರೀತಿಯಲ್ಲಿ ಮಾಡಿ; ದೇವರ ಮುಂದೆ ಇಟ್ಟ ವೀಳ್ಯದೆಲೆ ಮೇಲೆ ನಮಗೆ ಕೈಲಾದಷ್ಟು ಹಣವನ್ನು ಇಡಬೇಕು.. ಇದನ್ನು ನಾವು ಸೋಮವಾರವೇ ತಂದಿರುತ್ತೇವೆ ಆದ್ದರಿಂದ ಅದನ್ನು ಪೆರುಮಾಳ್‌ ಚಿತ್ರ ಅಥವಾ ರಾಮನ ಚಿತ್ರದ ಮುಂದೆ ಸೋಮವಾರ ಇಟ್ಟಿರಬೇಕು. ನಂತರ ಮಂಗಳವಾರ ಹನುಮಂತನಿಗೆ ಪೂಜೆ ಸಲ್ಲಿಸಬೇಕು. ಈ ವೇಳೆ ಶುದ್ಧ ಕುಂಕಮವನ್ನು ಪೂಜೆಗೆ ಬಳಸಬೇಕು. ಶ್ರದ್ಧಾ ಭಕ್ತಿಯಿಂದ ಹನುಮಂತನನ್ನು ಪೂಜೆ ಮಾಡಿ, ಸಾಲ ತೀರಿಸುವ ಶಕ್ತಿ ನೀಡುವಂತೆ ಬೇಡಿಕೊಳ್ಳಬೇಕು. ಹಾಗೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಪಾಸಿಟಿವ್‌ ಎನರ್ಜಿ ಸಂಚಾರ ಮಾಡಲು ಶುರು ಮಾಡುತ್ತದೆ.

ನಂತರ ಆ ವೀಳ್ಯದೆಲೆ ಏನು ಮಾಡಬೇಕು?;

ನಂತರ ಆ ವೀಳ್ಯದೆಲೆ ಏನು ಮಾಡಬೇಕು?; ಮಂಗಳವಾರ ಮನೆಯಲ್ಲಿ ಪೂಜೆ ಮಾಡಿದ ನಂತರ ಆ ವೀಳ್ಯದೆಲೆಯನ್ನು ಹಾಗೆಯೇ ತೆಗೆದುಕೊಂಡು ಹತ್ತಿರದ ಆಂಜನೇಯ ದೇವಸ್ಥಾನಕ್ಕೆ ಹೋಗಬೇಕು. ಅಲ್ಲಿ ದೇವರ ಪಾದದಡಿ ವೀಳ್ಯದೆಲೆ ಇಡಬೇಕು. ನಂತರ ಆರತಿ ತೆಗೆದುಕೊಂಡ ದೇಗುಲದ ಸುತ್ತ 11 ಪ್ರದಕ್ಷಿಣೆ ಹಾಕಬೇಕು. ಉರುಳು ಸೇವೆ ಬೇಕಾದರೂ ಮಾಡಬಹುದು. ಈ ವೇಳೆ ನಮ್ಮ ಬೇಡಿಕೆಯನ್ನು ಮನಸ್ಸಿನಲ್ಲಿ ಹೇಳುತ್ತಾ ಪ್ರಾರ್ಥಿಸಿಕೊಳ್ಳಬೇಕು. ಹೀಗೆ ಮಾಡಿದ ಮೇಲೆ ಕನಿಷ್ಠ ಅರ್ಧ ಗಂಟೆಯಾದರೂ ಹನುಮಂತದ ಆಲಯದಲ್ಲಿ ಕುಳಿತು, ನಿಷ್ಠಯಿಂದ ಬೇಡಿಕೊಳ್ಳಬೇಕು. ಈ ವೇಳೆ ನಿಮ್ಮ ದೇಹದಲ್ಲಿ ಪಾಸಿಟಿವ್‌ ಎನರ್ಜಿ ಸಂಚಾರವಾಗಿ ಧೈರ್ಯ ಮೂಡುತ್ತದೆ. ಅದು ನಿಮ್ಮ ಕೆಲಸದಲ್ಲಿ ಶ್ರದ್ಧೆ ಮೂಡಿಸುತ್ತದೆ. ಆ ಶ್ರದ್ಧೆಯೇ ನಿಮ್ಮನನ್ನು ಸಾಲದಿಂದ ದಡ ಸೇರಿಸುತ್ತದೆ.

ಒಂಬತ್ತು ಮಂಗಳವಾರ ಪೂಜೆ ಮಾಡಿ;

ಒಂಬತ್ತು ಮಂಗಳವಾರ ಪೂಜೆ ಮಾಡಿ; ಹೀಗೆ ಒಂಬತ್ತು ಮಂಗಳವಾರ ಪೂಜೆ ಮಾಡಬೇಕು. ಕೊನೆಯ ಮಂಗಳವಾರ ಆಂಜನೇಯನಿಗೆ ಕೆಂಪುವಸ್ತ್ರವನ್ನು ಸಮಪರ್ಪಣೆ ಮಾಡಬೇಕು. ಹೀಗೆ ಮಾಡುವುದರಿಂದ ಬಹುಬೇಗ ಸಾಲ ತೀರುತ್ತದೆ. ಮಾಡುವ ಎಲ್ಲಾ ಕೆಲಸಗಳೂ ಕೈ ಹಿಡಿಯುತ್ತವೆ.

Share Post