ಹುಬ್ಬಳ್ಳಿ, ಧಾರವಾಡದ 196 ಪೊಲೀಸರಿಗೆ ಕೊರೊನಾ ಸೋಂಕು
ಧಾರವಾಡ : ಅವಳಿ ನಗರವಾಗಿರುವ ಹುಬ್ಬಳ್ಳಿ ಧಾರವಾಡ ಪೊಲೀಸರಿಗೂ ಕೊರೊನಾ ಕಾಡಲು ಶುರು ಮಾಡಿದೆ. ಒಟ್ಟು 9 ಅಧಿಕಾರಿಗಳು ಸೇರಿ 196 ಪೊಲೀಸರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಎರಡು ದಿನಗಳ ಹಿಂದೆ ಕಮಿಷನರೇಟ್ ವ್ಯಾಪ್ತಿಯ 2019 ಪೊಲೀಸ್ ಸಿಬ್ಬಂದಿಗೆ ಕೊರೊನಾ ಟೆಸ್ಟ ಮಾಡಿಸಲಾಗಿತ್ತು. ಈಗ ಅವರಲ್ಲಿ 196 ಪೊಲೀಸರಿಗೆ ಪಾಸಿಟಿವ್ ವರದಿಯಾಗಿದೆ.
ಕೊರೊನಾ ಪಾಸಿಟಿವ್ ಬಂದಿರುವ ಎಲ್ಲರನ್ನು ಪ್ರತ್ಯೇಕವಾಗಿ ಐಸೋಲೇಟ್ ಮಾಡಲಾಗಿದೆ. ಎಲ್ಲರಿಗೂ ಸೌಮ್ಯ ಗುಣಲಕ್ಷಣಗಳು ಕಂಡು ಬಂದಿವೆ. ಆದಷ್ಟು ಬೇಗ ಗುಣಮುಖರಾಗಿ ಮರಳಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ದಿನದಿಂದ ದಿನಕ್ಕೆ ಕೊರೊನಾ ವಕ್ಕರಿಸುತ್ತಿರುವ ರೀತಿ ನೋಡಿದರೆ ಕಾನೂನು ಸುವ್ಯವಸ್ಥೆ ಕಾಪಾಡಲು ಕಷ್ಟವಾದೀತು ಎನಿಸುತ್ತಿದೆ.