NationalPolitics

ಪಂಚರಾಜ್ಯಗಳ ಚುನಾವಣೆ; ITV NETWORKನಿಂದ ಬೃಹತ್‌ ರಾಜಕೀಯ ಚರ್ಚಾ ಕಾರ್ಯಕ್ರಮ

ನವದೆಹಲಿ: ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಐಟಿವಿ ನೆಟ್‌ವರ್ಕ್‌ನ NEWS X ಮತ್ತು INDIA NEWS ಸಮೂಹ ಸುದ್ದಿ ವಾಹಿನಿಗಳ ಮೂಲಕ ಅತಿದೊಡ್ಡ ರಾಜಕೀಯ ಕಾನ್‌ಕ್ಲೇವ್‌ (ರಾಜಕೀಯ ಚರ್ಚಾ ಸಮಾವೇಶ) ಆಯೋಜಿಸಲಾಗಿದೆ. ಇಂದು ಬೆಳಗ್ಗೆ 10 ಗಂಟೆಯಿಂದ ಉತ್ತರ ಪ್ರದೇಶ ಹಾಗೂ ಉತ್ತರಾಖಂಡ್‌ ಚುನಾವಣೆ ಬಗ್ಗೆ ಚರ್ಚೆಗಳು ನಡೆಯಲಿದ್ದು, ಘಟಾನುಘಟಿ ರಾಜಕಾರಣಿ ಈ ರಾಜಕೀಯ ಕಾನ್‌ಕ್ಲೇವ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಮಾಜಿ ಸಿಎಂ ಅಖಿಲೇಶ್‌ ಯಾದವ್‌, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್‌ ದಾಮಿ,  ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್‌, ಅನುರಾಗ್‌ ಠಾಕೂರ್‌, ಎಂಐಎಂ ಮುಖ್ಯಸ್ಥ ಅಸಾದುದ್ದಿನ್‌ ಒವೈಸಿ, ಉತ್ತರಾಖಂಡ್‌ ಮಾಜಿ ಮುಖ್ಯಮಂತ್ರಿ ಹರೀಶ್‌ ರಾವತ್‌, ಉತ್ತರ ಪ್ರದೇಶದ ಉಪಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಸೇರಿದಂತೆ ಹಲವು ಪ್ರಮುಖ ನಾಯಕರು ಈ ಕಾನ್‌ಕ್ಲೇವ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರ ನೇರ ಪ್ರಸಾರವನ್ನು NEWS X ಮತ್ತು INDIA NEWS ಚಾನಲ್‌ಗಳಲ್ಲಿ ವೀಕ್ಷಿಸಬಹುದು. www.newsxkannada.com ವೆಬ್‌ಸೈಟ್‌ನಲ್ಲೂ ಕಾನ್‌ಕ್ಲೇವ್‌ ನೇರಪ್ರಸಾರವಾಗಲಿದೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ನೇರ ಪ್ರಸಾರ ವೀಕ್ಷಣೆಗಾಗಿ ಈ ಕೆಳಗಿನ ಲಿಂಕ್‌ಗಳನ್ನು ಕ್ಲಿಕ್‌ ಮಾಡಬಹುದು.

Watch More Videos: https://www.youtube.com/user/newsxlive

For More information on this News Visit: https://www.newsx.com/

Home

ಈ ಐದು ರಾಜ್ಯಗಳ ಚುನಾವಣೆಯಲ್ಲಿ ಅತಿ ಹೆಚ್ಚು ಗಮನ ಸೆಳೆದಿರೋದು ಉತ್ತಪ್ರದೇಶ. ದೇಶದಲ್ಲೇ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳಿರುವ ರಾಜ್ಯ ಉತ್ತರ ಪ್ರದೇಶ. ಹೀಗಾಗಿ, ITV ನೆಟ್‌ವರ್ಕ್‌ ಪಂಚ ರಾಜ್ಯಗಳ ಚುನಾವಣೆಯ ಮೊದಲ ಕಾನ್‌ಕ್ಲೇವ್‌ನಲ್ಲಿ ಉತ್ತರ ಪ್ರದೇಶ ಹಾಗೂ ಉತ್ತರಾಖಂಡವನ್ನು ಆಯ್ಕೆ ಮಾಡಿಕೊಂಡಿದೆ.

Share Post