Health

ಮೊದಲ ದಿನವೇ 9ಲಕ್ಷ ಮಂದಿಗೆ ಬೂಸ್ಟರ್‌ ಡೋಸ್‌

ನವದೆಹಲಿ : ಜನವರಿ 10ರಿಂದ ಬೂಸ್ಟರ್‌ ಡೋಸ್‌ ಅಭಿಯಾನವನ್ನು ಸರ್ಕಾರ ಶುರುಮಾಡಿದೆ. ಮೊದಲ ಹಂತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ, ಆರೋಗ್ಯ ಕಾರ್ಯಕರ್ತರಿಗೆ ಕೊಡಕು ನಿರ್ಧರಿಸಿತ್ತು. ಸೋಮವಾರ ಒಂದೇ ದಿನ ಸುಮಾರು 9 ಲಕ್ಷ ಮಂದಿ ಬೂಸ್ಟರ್‌ ಡೋಸ್‌ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಬೂಸ್ಟರ್‌ ಡೋಸ್‌ ಹಾಕಿಸಿಕೊಳ್ಳಲು ಹೊಸದಾಗಿ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ. ನಿಮಗೆ ಎಲ್ಲಾ ಮಾಹಿತಿ ಬೇಕಿದ್ದಲ್ಲಿ ಕೋವಿನ್‌ ಪೋರ್ಟಲ್‌ಗೆ ವಿಸಿಟ್‌ ಮಾಡಿದರೆ ತಿಳಿಯುವುದು. ಬೂಸ್ಟರ್‌ ಡೋಸ್‌ ಆಗಿ ಮಿಕ್ಸ್‌ ಲಸಿಕೆ ಹಾಕಿಸುವಂತಿಲ್ಲ. ನೀವು ಮುಂಚೆ ಯಾವ ಲಸಿಕೆ ಪಡೆದಿದ್ದೀರೋ ಅದನ್ನೇ ಪಡೆಯಬೇಕು. ಮುಂಚೆ ಕೋವೀಶೀಲ್ಡ್‌ ಪಡೆದಿದ್ದರೆ ಈಗಲೂ ಕೋವಿಶೀಲ್ಡ್‌ ಅನ್ನೇ ಪಡೆಯಬೇಕು.

ಇನ್ನು ಕರ್ನಾಟಕದಲ್ಲಿ ಮೂರನೇ ಡೋಸ್‌ ಪಡೆಯಲು 21 ಲಕ್ಷ ಜನ ಅರ್ಹರು ಎನ್ನಲಾಗಿದೆ.

Share Post