Bengaluru

ಮೆಜೆಸ್ಟಿಕ್‌ನಲ್ಲಿ ಬಸ್‌ಗಳಿಲ್ಲದೆ ಪ್ರಯಾಣಿಕರ ಪರದಾಟ

ಬೆಂಗಳೂರು: ಕೊರೊನಾ ತಡೆಗೆ ಕರ್ನಾಟಕ ಸರ್ಕಾರ ವೀಕೆಂಡ್‌ ಕರ್ಫ್ಯೂ ವಿಧಿಸಿದೆ. ಆದ್ರೆ ರೈಲು, ವಿಮಾನ ಸಂಚಾರ, ಕೆಎಸ್‌ಆರ್‌ಟಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟು ಉಳಿದ ಎಲ್ಲಾ ಸೇವೆಗಳನ್ನು ಬಂದ್‌ ಮಾಡದ್ದಾರೆ. ವಾರಾಂತ್ಯದ ನಿಷೇಧಾಜ್ಞೆಯಿಂದ ಪ್ರಯಾಣಿಕರು ಈಗ ಪರದಾಡುವ ಪರಿಸ್ಥಿತಿ ಬಂದಿದೆ. ಬೇರೆ ಬೇರೆ ರಾಜ್ಯಗಳಿಂದ ಬಂದಿಳಿದ ಪ್ರಯಾಣಿಕರು ಬಿಎಂಟಿಸಿ ಬಸ್‌ ಇಲ್ಲದೆ ಮೆಜೆಸ್ಟಿಕ್‌ನಲ್ಲಿ ಕಾಯುವಂತಹ ಪರಿಸ್ಥಿತಿ ಏರ್ಪಾಡಾಗಿದೆ. ರೈಲು, ಬಸ್‌ನಲ್ಲಿ ಕೆಲಸದ ನಿಮಿತ್ತ ಬಂದವರಿಗೆ ನಿಯೋಜಿತ ಸ್ಥಳಗಳಿಗೆ ತೆರಳಲು ಆಗದೆ ಸರ್ಕಾರಕ್ಕೆ ಹಿಡಿಶಾಪ ಹಾಕ್ತಿದಾರೆ. ಬಸ್‌ ರೈಲುಗಳನ್ನು ಬಿಟ್ಟು, ಸಿಟಿಯಲ್ಲಿ ಓಡಾಟಕ್ಕೆ ಅನುವು ಮಾಡಿಕೊಡದಿದ್ರೆ ನಾವು ಹೇಗೆ ಮನೆ ಮತ್ತು ಕೆಲಸದ ಸ್ಥಳಗಳಿಗೆ ತೆರಳುವುದು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಿಎಂಟಿಸಿ ಬಸ್‌ಗಳು ನಿಂತಲ್ಲೇ ನಿಂತಿವೆ. ಆಗೊಮ್ಮೆ ಈಗೊಮ್ಮೆ ಬರುವ ಬಸ್‌ಗಳಿಗೆ ಜನ ಮುಗಿಬೀಳುತ್ತಿದ್ದಾರೆ.

ಇನ್ನೂ ನಗರದಲ್ಲಿ ಆಟೋ, ಓಲಾ, ಊಬರ್‌ ಓಡಾಟಕ್ಕೆ ಪೊಲೀಸರು ಬ್ರೇಕ್‌ ಹಾಕುತ್ತಿದ್ದಾರೆ. ಹೆದ್ದಾರಿ ಹಾಗೂ ಮುಖ್ಯ ರಸ್ತೆಗಳಲ್ಲಿ ಬ್ಯಾರಿಕೇಡ್‌ ಹಾಕಿ ಪ್ರತಿಯೊಂದು ವಾಹನವನ್ನು ಚೆಕ್‌ ಮಾಡ್ತಿದಾರೆ. ಅನಗತ್ಯವಾಗಿ ಓಡಾಡುತ್ತಿರುವುದು ಗಮನಕ್ಕೆ ಬಂದ ಕೂಡಲೇ ವಾಹನವನ್ನು ಸೀಜ್‌ ಮಾಡ್ತಿದಾರೆ. ಪೊಲೀಸರ ಈ ಕೃತ್ಯಕ್ಕೆ ಆಟೋ, ಓಲಾ, ಊಬರ್‌ ಡ್ರೈವರ್‌ಗಳು ಕಿಡಿ ಕಾರಿದ್ದಾರೆ.

Share Post