ಕೋವಿಡ್ ಕಾರಣ : ಬಿಸಿಸಿಐ ಅಧಿಕಾರಿಗಳಿಗೆ ಪಾಸಿಟಿವ್, ಕಚೇರಿಗೆ ಬೀಗ
ಮುಂಬೈ : ಬಿಸಿಸಿಐ ಮೂಖ್ಯ ಕಚೇರಿಗೆ ಬೀಗ ಬಿದ್ದಿದೆ. ಕೊರೊನಾ ಆಟಗಾರರಿಗಷ್ಟೇ ಅಲ್ಲದೇ ಅಧಿಕಾರಿಗಳಿಗೂ ವಕ್ಕರಿಸಿದೆ. ಮೂರನೇ ಅಲೆ ರೂಪದಲ್ಲಿ ಕೊರೊನಾ ಆರ್ಭಟ ಎಲ್ಲೆಡೆ ಹೆಚ್ಚಾಗುತ್ತಲೇ ಇದೆ. ಕಳೆದ 24 ಗಂಟೆಯಲ್ಲಿ 1,41,896 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, 285 ಜನ ಮೃತಪಟ್ಟಿದ್ದಾರೆ.
ಬಿಸಿಸಿಐನ ಮುಖ್ಯ ಕಚೇರಿ ಮುಂಬೈನ ವಾಂಖೇಡೆ ಕ್ರಿಡಾಂಗಣದ ಪಕ್ಕದಲ್ಲಿಯೇ ಇದೆ. ಕಚೇರಿಯ 3 ಜನ ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿರುವ ಕಾರಣ ಕಚೇರಿಯನ್ನು ಮೂರು ದಿನಗಳ ಕಾಲ ಮುಚ್ಚಲಾಗಿದೆ. ಸೋಂಕು ತಗುಲಿರುವ ಸಿಬ್ಬಂದಿಗಳಿಗೆ ಮನೆಯಲ್ಲಿಯೃ ಐಸೋಲೇಟ್ ಅಗಲು ಬಿಸಿಸಿಐ ಸೂಚಿಸಿದೆ.
ಮಹಾರಾಷ್ಟ್ರ ಕ್ರಿಕೆಟ್ ಅಸೋಷಿಯೇನ್ ಕೂಡ ಇದೇ ಕಟ್ಟಡದಲ್ಲಿ ಇದೆ. ಇದಕ್ಕೆ ಸಂಬಂಧಿಸಿದ ೧೫ ಸಿಬ್ಬಂದಿಗೆ ಕೋವಿಡ್ ಕಾಣಿಸಿಕೊಂಡಿದೆ.
ಇತ್ತೀಚೆಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೂ ಕೋವಿಡ್ ಕಾಣಿಸಿಕೊಂಡಿತ್ತು. ಅವರು ಚಿಕಿತ್ಸೆ ಪಡೆದು ಗುಣಮುಖರಾದರು.
ಕೋವಿಡ್ ಕಾರಣದಿಂದಲೇ ರಣಜಿ ಟ್ರೋಫಿ ಸೇರಿದಂತೆ ಇನ್ನು ಎರಡು ಟೂರ್ನಿಗಳನ್ನು ಬಿಸಿಸಿಐ ಮುಂದೂಡಿದೆ. ಮೂರನೇ ಅಲೆ ಮುಗಿದ ಬಳಿಕವಷ್ಟೇ ಇದರ ಬಗ್ಗೆ ತೀರ್ಮಾನಕ್ಕೆ ಬರಲಿದೆ ಬಿಸಿಸಿಐ. ಇನ್ನು ಫೆಬ್ರುವರಿಯಲ್ಲಿ ನಡೆಯಬೇಕಿದ್ದ ಐಪಿಎಲ್ ಮೆಗಾ ಆಕ್ಷನ್ ಕೂಡ ಕೋವಿಡ್ ಕಾರಣ ಪೋಸ್ಟ್ ಪೋನ್ ಆಗುವ ಸಾಧ್ಯತೆ ಹೆಚ್ಚಾಗಿ ಕಾಣಿಸುತ್ತಿದೆ.