Cinema

KGF Chapter 2 : ಬರ್ತಡೇ ಪೋಸ್ಟರ್‌ ಬಿಡುಗಡೆ – ರಿಲೀಸ್‌ ಡೇಟ್‌ ಬಗ್ಗೆ ಕ್ಲಾರಿಟಿ ಕೊಟ್ಟ ತಂಡ

ಬೆಂಗಳೂರು : KGF Chapter 2  ಸಿನಿಮಾ ಸಾಕಷ್ಟು ಹೈಪ್‌ ಪಡೆದುಕೊಂಡಿದೆ. ಭಾರತಾದ್ಯಂತ ಸಿನಿಮಾಗೆ ಫ್ಯಾನ್ಸ್‌ ಹುಟ್ಟಿಕೊಂಡಿದ್ದಾರೆ. ಯಶ್‌ ಈಗ ಕೇವಲ ರಾಕಿಂಗ್‌ ಸ್ಟಾರ್‌ ಅಲ್ಲ ನ್ಯಾಶನಲ್‌ ಸ್ಟಾರ್‌ ಕೂಡ ಆಗಿದ್ದಾರೆ. ಇಂದು ಯಶ್‌ ಅವರ ಹುಟ್ಟಿದ ಹಬ್ಬದ ಪ್ರಯುಕ್ತ KGF ಚಿತ್ರತಂಡದವರು ಪೋಸ್ಟರ್‌ ಒಂದನ್ನು ರಿಲೀಸ್‌ ಮಾಡಿದ್ದಾರೆ.

ಸಿನಿಮಾ ಪೋಸ್ಟರ್‌ ರಿಲೀಸ್‌ ಮಾಡಿರುವ ಚಿತ್ರತಂಡ ರಾಕಿ ಹುಟ್ಟು ಹಬ್ಬಕ್ಕೆ ಶುಭಾಷಯ ತಿಳಿಸಿದೆ. ನಿರ್ದೇಶಕ ಪ್ರಶಾಂತ್‌ ನೀಲ್‌, ನಿರ್ಮಾಪಕ ವಿಜಯ್‌ ಕಿರಗಂದೂರು, ಡಿ.ಓ.ಪಿ ಭುವನ್‌ ಗೌಡ ಸೇರಿದಂತೆ ಎಲ್ಲರೂ ಸಿನಿಮಾದ ಹೊಸ ಪೋಸ್ಟರ್‌ ಶೇರ್‌ ಮಾಡುವ ಮೂಲಕ ವಿಶ್‌ ಮಾಡಿದ್ದಾರೆ.

ಕೊರೊನಾ ಕಾರಣದಿಂದ ಯಶ್‌ ಹಬ್ಬಕ್ಕೆ ಬ್ರೆಕ್‌ ಬಿದ್ದಿದೆ ಆದರೂ ಟ್ವಿಟ್ಟರ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಯಶ್‌ ಅವರ ಹುಟ್ಟು ಹಬ್ಬಕ್ಕೆ ಬರ ಬಂದಿಲ್ಲ. ಯಶ್‌ ಸಂಬಂಧ ಪಟ್ಟ ಎಲ್ಲಾ ಹ್ಯಾಶ್‌ಟ್ಯಾಗ್‌ ಕೂಡ ಟ್ರೆಂಡಿಂಗ್‌ ಆಗ್ತಿವೆ.

ಇನ್ನು ಪೋಸ್ಟರ್‌ನಲ್ಲಿ ರಿಲೀಸ್‌ ಡೇಟ್‌ ಅನ್ನು ಘೋಷಣೆ ಮಾಡಿರುವ ತಂಡ ಏಪ್ರಿಲ್‌ ೧೪ಕ್ಕೆ ಸಿನಿಮಾ ಬಿಡುಗಡೆ ಮಾಡೋದಾಗಿ ಹೇಳಿಕೊಂಡಿದೆ. ಈಗಿರುವ ಮೂರನೇ ಅಲೆಗೆ ಹೆದರಿ ಸಾಕಷ್ಟು ಸಿನಿಮಾ ತಂಡಗಳು ತಮ್ಮ ಸಿನಿಮಾ ರಿಲೀಸ್‌ ಅನ್ನು ಮುಂದೂಡಿದೆ ಆದರೂ ಕೆಜಿಎಫ್‌ ಮಾತ್ರ ದಿಟ್ಟ ನಿರ್ಧಾರ ತೆಗೆದುಕೊಂಡಂತೆ ಕಾಣ್ತಿದೆ.

ತಜ್ಞರ್‌ ವರದಿಯ ಪ್ರಕಾರ ನೋಡಿದರೆ ಮೂರನೇ ಅಲೆ ಮಾರ್ಚ್‌ ಅಂತ್ಯದಲ್ಲಿ ಕೊನೆಗಾಣಲಿದೆ ಎಂದು ಹೇಳಿದ್ದಾರೆ. ಪರಿಸ್ಥಿತಿ ನೋಡಿ ಬಿಡುಗಡೆ ದಿನಾಂಕವನ್ನು ಬದಲಿಸುತ್ತಾ ಎಂದು ಕೂಡ ನಾವು ಕಾದು ನೋಡಬೇಕಾಗಿದೆ.

ಇನ್ನು ನಮ್ಮ ಸಚಿವರಾದ ಅಶ್ವಥ್‌ ನಾರಾಯಣ್‌ ಅವರು ಕೂಡ ರಾಕಿ ಭಾಯ್‌ಗೆ ಟ್ವೀಟ್‌ ಮೂಲಕ ಶುಭಾಷಯ ತಿಳಿಸಿದ್ದಾರೆ.

 

 

Share Post