ಮೋದಿಯವರ 15 ನಿಮಿಷಕ್ಕೆ ಬೆಲೆ ಇರೋದಾದ್ರೆ…ರೈತರ ಒಂದೂವರೆ ವರ್ಷಕ್ಕೆ ಬೆಲೆ ಇಲ್ವಾ..?
ಪಂಜಾಬ್: ಪ್ರಧಾನಿ ನರೇಂದ್ರ ಮೋದಿಯವರಿಗೆ ಹದಿನೈದು ನಿಮಿಷಕ್ಕೆ ಬೆಲೆ ಇರೋದಾದ್ರೆ, ನಮ್ಮ ರೈತರು ಗಡಿಯಲ್ಲಿ ಒಂದೂವರೆ ವರ್ಷ ಕಾದಿದ್ದಕ್ಕೆ ಬೆಲೆ ಇಲ್ವಾ ಎಂದು ಭದ್ರತಾ ಲೋಪದ ಬಗ್ಗೆ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ವ್ಯಂಗ್ಯವಾಡಿದ್ದಾರೆ.
ಪಂಜಾಬ್‌ನಲ್ಲಿ ರ್ಯಾಲಿ ನಡೆಸಲು ತೆರಳಿದ್ದ ಪ್ರಧಾನಿ ಮೋದಿಗೆ ರೈತರ ಪ್ರತಿಭಟನೆಯಿಂದ ಮೇಲ್ಸೇತುವೆಯಲ್ಲೇ ೧೫-೨೦ನಿಮಿಷ ನಿಂತಲ್ಲೇ ನಿಲ್ಲುವ ಪರಿಸ್ಥಿತಿ ಎದುರಾಗಿತ್ತು. ಭದ್ರತಾ ಲೋಪದ ವಿರುದ್ಧ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ತಮ್ಮದೇ ದಾಟಿಯ ಹೇಳಿಕೆಗಳನ್ನು ನೀಡಿದ್ರು. ಅದಕ್ಕೆ ಪ್ರತ್ಯುತ್ತರ ನೀಡಿದ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಈ ಮಾತುಗಳನ್ನು ಹೇಳಿದ್ದಾರೆ.
ನಾನು ಪ್ರಧಾನಿ ನರೇಂದ್ರ ಮೋದಿಯವರನ್ನು ನೇರವಾಗಿ ಪ್ರಶ್ನಿಸುತ್ತಿದ್ದೇನೆ ಪ್ರತಿಭಟನೆಯಿಂದ ನಿಮಗೆ ಹದಿನೈದು ನಿಮಿಷ ತೊಂದರೆ ಅನ್ನೋದೆ ಆದ್ರೆ, ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಮ್ಮ ರೈತರು ಮನೆ-ಮಠ, ಹೆಂಡತಿ-ಮಕ್ಕಳನ್ನು ತೊರೆದು ದೆಹಲಿ ಗಡಿಯಲ್ಲಿ ಚಳಿ-ಗಾಳಿಯೆನ್ನದೆ ಒಂದೂವರೆ ವರ್ಷಗಳ ಕಾಲ ಅಲ್ಲಿಯೇ ಇದ್ದರಲ್ಲ ಇದಕ್ಕೆ ಏನ್ ಹೇಳುತ್ತೀರಿ?
ಪ್ರತಿಭಟನೆ ಸಮಯದಲ್ಲಿ ನಿಮ್ಮ ಸರ್ಕಾರದ ಆಜ್ಞೆಯಂತೆ ರೈತರ ಮೇಲೆ ಆಕ್ರಮಣ ನಡೆದಾಗ ಅನೇಕ ರೈತರು ಸಾವನ್ನಪ್ಪಿದ್ರಲ್ಲ ಅವರ ಮರಣಕ್ಕೆ ನೀವೇನು ಉತ್ತರ ಕೊಡುತ್ತೀರಿ? ನಿಮಗಾದರೂ ಬೆಂಗಾವಲು ವಾಹನ, ಸುಸಜ್ಜಿತ ಕಾರು ಎಲ್ಲವೂ ಇದ್ದು ತೊಂದರೆ ಆಯಿತೆಂದು ಹೇಳಿಕೆ ನೀಡಿದ್ದೀರಿ ಹಾಗಿದ್ದಲ್ಲಿ ದೇಶದ ಬೆನ್ನೆಲುಬು ರೈತನ ರಕ್ಷಣೆ ಯಾರಪ್ಪನ ಹೊಣೆ ಎಂದು ಸಿಧು ಸ್ವಲ್ಪ ಖಾರವಾಗಿ ಪ್ರಶ್ನಿಸಿದ್ದಾರೆ.