ಶಿಮ್ಲಾದಲ್ಲಿ ಹಿಮಪಾತ; ಕಣಿವೆಗೆ ಜಾರಿದ ಬಸ್
ಶಿಮ್ಲಾ: ರಸ್ತೆಗಳಲ್ಲಿ ಹಿಮದ ರಾಶಿ ಬಿದ್ದಿದ್ದರಿಂದಾಗಿ ಪ್ರವಾಸಿರಿದ್ದ ಮಿನ್ ಬಸ್ ಒಂದು ಕಣಿವೆಗೆ ಜಾರಿರುವ ಘಟನೆ ಶಿಮ್ಲಾದ ಕಿನ್ನೌರ್ ಬಳಿಯ ಸಾಂಗ್ಲಾ ಕಣಿವೆಯಲ್ಲಿ ನಡೆದಿದೆ. ಇಪ್ಪತ್ತಕ್ಕೂ ಹೆಚ್ಚು ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಮಿನಿ ಬಸ್ ಸಾಂಗ್ಲಾ ಕಣಿವೆಯ ಖರೋಂಗ್ಲಾ ನುಲ್ಲಾ ಬಳಿ ಬಂದಾಗ, ಹಿಮದಲ್ಲಿ ಜಾರಿದೆ. ಚಕ್ರಮಗಳು ಹಿಮದಲ್ಲಿ ಜಾರಿದ್ದರಿಂದ ರಸ್ತೆ ಬಿಟ್ಟು ಬಸ್ ಪಕ್ಕಕ್ಕೆ ಸರಿದಿದೆ.
ಬಸ್ ನಿಧಾನವಾಗಿ ಚಲಿಸುತ್ತಿದ್ದರಿಂದ ಯಾವುದೇ ಅನಾಹುತವಾಗಿಲ್ಲ. ಸ್ಫೀಡಾಗಿ ತೆರಳಿದ್ದರೆ ದೊಡ್ಡ ದುರಂತವೇ ನಡೆದುಹೋಗುತ್ತಿತ್ತು. ಅಧರೆ ಅದೃಷ್ಟವಶಾತ್ ಬಸ್‌ನಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಕಿನ್ನೌರ್ ಜಿಲ್ಲಾಧಿಕಾರಿ ಹುಸೇನ್ ಸಾಧಿಕ್ ಹೇಳಿದ್ದಾರೆ.