Districts

ಆಸ್ಪತ್ರೆಯಲ್ಲೇ ಕತ್ತುಕುಯ್ದುಕೊಂಡು ಮಹಿಳೆ ಆತ್ಮಹತ್ಯೆ

ಮೈಸೂರು: ಮಗಳ ಅನಾರೋಗ್ಯದಿಂದ ಬೇಸತ್ತು ಖಿನ್ನತೆಗೆ ಒಳಗಾಗಿದ್ದ ಮಹಿಳೆಯೊಬ್ಬರು ಆಸ್ಪತ್ರೆಯ ಬಾತ್‌ರೂಮ್‌ನಲ್ಲೇ ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮೈಸೂರು ನಗರದಲ್ಲಿ ನಡೆದಿದೆ. ಹೂಟಗಳ್ಳಿ ನಿವಾಸಿ 30 ವರ್ಷದ ಯಾಸ್ಮಿನ್‌ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮೂರು ದಿನದ ಹಿಂದೆ ಈ ಮಹಿಳೆ ಕತ್ತುಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಾರೆ.
ಯಾಸ್ಮಿನ್‌ ಅವರ ಏಳು ವರ್ಷದ ಮಗಳಿಗೆ ತೀವ್ರ ಅನಾರೋಗ್ಯ ಉಂಟಾಗಿತ್ತು. ಹಲವು ದಿನಗಳಿಂದ ಮಗಳಿಗೆ ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ವಾಸಿಯಾಗಿರಲಿಲ್ಲ. ಹೀಗಾಗಿ, ಚೆಲುವಾಂಬ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಪುಟ್ಟ ಮಗಳ ಆರೋಗ್ಯ ಸರಿಯಿಲ್ಲದ ಕಾರಣ ಯಾಸ್ಮಿನ್‌ ಖಿನ್ನತೆಗೆ ಒಳಗಾಗಿದ್ದರು. ಜನವರಿ ನಾಲ್ಕರಂದು ಯಾಸ್ಮಿನ್‌, ವೈದ್ಯರು ಚಿಕಿತ್ಸೆ ನೀಡಿ ಹೋಗಿದ್ದಾರೆ. ಅನಂತರ ಮಗಳನ್ನು ಮಲಗಿಸಿದ ಯಾಸ್ಮಿನ್‌, ಹಣ್ಣು ಕುಯ್ಯಲು ಇಟ್ಟುಕೊಂಡಿದ್ದ ಚಾಕುವನ್ನು ಬಾತ್‌ರೂಮ್‌ಗೆ ತೆಗೆದುಕೊಂಡುಹೋಗಿ ಗಂಟಲು ಕುಯ್ದುಕೊಂಡಿದ್ದರು.

Share Post