ಲಾಕ್ಡೌನ್ ಅನ್ನೋದು ಕಳೆದು ಹೋದ ನೀತಿ:ಸುಧಾಕರ್
ಬೆಂಗಳೂರು: ಲಾಕ್ಡೌನ್ ಅನ್ನೋದು ಕಳೆದು ಹೋದ ನೀತಿ ಅದಕ್ಕೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಕೊರೊನಾ ಮೊದಲನೇ ಮತ್ತು ಎರಡನೇ ಅಲೆಯಲ್ಲಿ ನಮಗೆ ಚಿಕಿತ್ಸಾ ನೀತಿ ಅಷ್ಟಾಗಿ ತಿಳಿದಿರಲಿಲ್ಲ ಹಾಗಾಗಿ ಲಾಕ್ ಡೌನ್ ಅನಿವಾರ್ಯ ಆಗಿತ್ತು. ಈಗ ಕೊರೊನಾ ಮೂರನೇ ಅಲೆ ಬರ್ತಾ ಇದೆ. ಅದಕ್ಕೆ ನಾವು ಬಗ್ಗಿ ನಡೆಯಬೇಕು. ಅಲೆಗೆ ಎದುರು ನಡೆಯೋಕೆ ಆಗಲ್ಲ. ಸ್ವಲ್ಪ ತಲೆ ಕೆಳಗೆ ಮಾಡಿದ್ರೆ ಅಪಾಯವನ್ನು ಎದುರಿಸಬಹುದು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಇನ್ನೂ ಲಾಕ್ಡೌನ್ ಬಗ್ಗೆ ಮಾತನಾಡಿ, ಯಾವುದೇ ಕಾರಣಕ್ಕೂ ಲಾಕ್ಡೌನ್ ಮಾಡಲ್ಲ ಜನ ಹೆದರುವ ಅತಗ್ಯ ಇಲ್ಲ ಮೊದಲಿನ ಸ್ಥಿತಿ ರಾಜ್ಯಕ್ಕೆ ಬರಲ್ಲ. ನಮಗೂ ಜನರ ಬಗ್ಗೆ ಕಾಳಜಿ ಇದೆ ಅವರ ಬದುಕು ನಮಗೂ ಮುಖ್ಯ. ಹೆಚ್ಚಾಗುತ್ತಿರುವ ಕೊರೊನಾ ಸೋಂಕಿನ ಬಗ್ಗೆ ಆತಂಕ ಬೇಡ ಲಸಿಕಾ ಅಭಿಯಾನ ಸಂಪೂರ್ಣವಾಗಿ ಯಶಸ್ವಿಯಾಗಿದೆ. ರೋಗಕ್ಕೆ ಸೂಕ್ತವಾದ ಮದ್ದು ನಮ್ಮಲ್ಲಿದೆ. ಧೈರ್ಯದಿಂದ ಎಲ್ಲವನ್ನೂ ಎದುರಿಸೋಣ ಎಂದು ಸಚಿವ ಸುಧಾಕರ್ ಭರವಸೆ ನೀಡಿದ್ರು.