Crime

ಮಹಿಳೆ ಕೂದಲ ಮೇಲೆ ಉಗಿದ ಹೇರ್‌ಸ್ಟೈಲಿಸ್ಟ್‌; ಆರೋಪಿ ಜಾವೆದ್‌ ಹಬೀಬ್‌ ವಿರುದ್ಧ ಕೇಸ್‌

ನವದೆಹಲಿ: ಹೇರ್‌ಸ್ಟೈಲಿಂಗ್‌ ವರ್ಕ್‌ಶಾಪ್‌ನಲ್ಲಿ ಮಹಿಳೆಯ ಕೂದಲಿನ ಮೇಲೆ ಉಗಿದ ಖ್ಯಾತ ಹೇರ್‌ ಸ್ಟೈಲಿಸ್ಟ್‌ ಜಾವೆದ್‌ ಹಬೀಬ್‌ ವಿರುದ್ಧ ಮನ್ಸೂರ್‌ ಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಜಾಫರ್‌ ನಗರದ ಖಾಸಗಿ ಹೋಟೆಲ್‌ನಲ್ಲಿ ಹೇರ್‌ಸ್ಟೈಲಿಂಗ್‌ ವರ್ಕ್‌ಶಾಪ್‌ ಆಯೋಜಿಸಲಾಗಿತ್ತು. ಈ ವೇಳೆ ಮಹಿಳೆಯೊಬ್ಬರನ್ನು ವೇದಿಕೆ ಮೇಲೆ ಕರೆದ ಖ್ಯಾತ ಹೇರ್‌ಸ್ಟೈಲಿಸ್ಟ್‌ ಜಾವೆದ್‌ ಹಬೀಬ್‌, ಆಕೆಗೆ ಹೇರ್‌ ಸ್ಟೈಲ್‌ ಮಾಡುವ ವೇಳೆ ಕೂದಲಿನ ಮೇಲೆ ಉಗುಳಿದ್ದರು. ಈ ವೇಳೆ ಅವರು ನೀರು ಸಿಗಲಿಲ್ಲ ಅಂದರೆ, ಅದಕ್ಕೆ ಬದಲಾಗಿ ಉಗುಳು ಬಳಸಬಹುದು ಎಂದು ಹೇಳಿದ್ದರು.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಜಾವೆದ್‌ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ನಡುವೆಯೇ ಜಾವೆದ್‌ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶ ರವಾನಿಸಿದ್ದು, ತಮ್ಮ ವರ್ತನೆಗೆ ಕ್ಷಮೆ ಕೇಳಿದ್ದರು. ಆದ್ರೆ, ಮಹಿಳೆ ಮಾತ್ರ, ಜಾವೆದ್‌ ವರ್ತನೆ ವಿರುದ್ಧ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಜಾವೆದ್‌ ವಿರುದ್ಧ ಐಪಿಸಿ ಸೆಕ್ಷನ್‌ 355 ಮತ್ತು 504 ರ ಅಡಿ ಕೇಸ್‌ ದಾಖಲಿಸಿದ್ದಾರೆ.

Share Post