National

ದೈವದತ್ತವಾದ ಮರ ಕಡಿದಿದ್ದಕ್ಕೆ ಹೆಣವಾದ ವ್ಯಕ್ತಿ: ಕೇಸ್‌ ದಾಖಲು

ಜಾರ್ಖಾಂಡ್:‌ ಮರ ಕಡಿದಿದ್ದಕ್ಕೆ ವ್ಯಕ್ತಿಯನ್ನು ಹಿಡಿದು ಥಳಿಸಿ ಕೊಲೆ ಮಾಡಿರುವ ಘಟನೆ ಜಾರ್ಖಂಡ್‌ನ ಸಿಮ್ಡೆಗಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಸಂಜು ಪ್ರಧಾನ್‌ ಮೃತ ವ್ಯಕ್ತಿಯಾಗಿದ್ದು, ಕೊಲೆ ಮಾಡಿದ ಗುಂಪಿನ ವಿರುದ್ಧ ಕೇಸ್‌ ದಾಖಲಾಗಿದೆ.

ಏನಿದು ಪ್ರಕರಣ..?
ಆ ಭಾಗದಲ್ಲಿ ಕೆಲವು ಮರಗಳಿಗೆ ದೈವದತ್ತವಾದ ಶಕ್ತಿಯಿದೆ ಎಂದು ನಂಬಿ ಜನ ಅದಕ್ಕೆ ಪವಿತ್ರವಾದ ಸ್ಥಾನ ಕಲ್ಪಸಿ ಸದಾ ಪೂಜೆ-ಪುನಸ್ಕಾರ ಮಾಡ್ತಿದ್ರಂತೆ. ಧಾರ್ಮಿಕ ವಿಚಾರಗಳಲ್ಲಿ ನಂಬಿಕೆಯಿಲ್ಲದ ಸಂಜು ಪ್ರಧಾನ್‌ ಮರಗಳನ್ನು ಕಡಿದು ಮಾರಾಟ ಮಾಡ್ತಿದ್ನಂತೆ. ಇದನ್ನು ಕಂಡ ಸ್ಥಳೀಯರು ಅನೇಕ ಬಾರಿ ಸಂಜುಗೆ ಎಚ್ಚರಿಕೆ ಸಹ ನೀಡಿದ್ರಂತೆ. ಇದಕ್ಕೂ ಮೊದಲು ಮೂರು ಬಾರಿ ಮರ ಕಡಿಯುವ ವೇಳೆ ಸಿಕ್ಕಿಬಿದ್ದಾಗ ಇದು ಪವಿತ್ರವಾದ ಮರ, ಧರ್ಮನಿಂದನೆ ಮಾಡಬೇಡ ಅನೇಕ ಸಲ ತಾಕೀತು ಮಾಡಿದ್ರಂತೆ. ಅವನ ಈ ಕೆಲಸದ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೂ ಸಹ ಮಾಹಿತಿ ನೀಡಿದ್ರಂತೆ. ಯಾವುದೂ ಪ್ರಯೋಜನ ವಾಗದ ಕಾರಣ ಕಾನೂನನ್ನ ಕೈಗೆ ತೆಗೆದುಕೊಂಡು ಸಂಜುನನ್ನು ಸುಟ್ಟು ಭಸ್ಮ ಮಾಡಿದ್ದಾರೆ.

ಸಂಜು ಪ್ರಧಾನ್‌ ಕೊಲೆಯಲ್ಲಿ ಒಬ್ಬರು, ಇಬ್ಬರ ಕೈವಾಡವಿಲ್ಲ ಒಂದು ಗುಂಪೇ ಸೇರಿದೆ. ಮನೆ ಬಳಿ ಹೋಗಿ ಆತನನ್ನು ಆಚೆ ಬರುವಂತೆ ಸ್ಥಳಿಯರು ಕೆರದಿದ್ದಾರೆ. ಆಚೆ ಬರುತ್ತಿದ್ದಂತೆ, ಕೈಗೆ ಸಿಕ್ಕ ಕಲ್ಲುಗಳಿಂದ ಹೊಡೆದು ಸಾಯಿಸಿದ್ದಾರೆ. ಬಳಿಕ ಅವರ ಮನೆಯ ನೂರು ಮೀಟರ್‌ ಅಂತರದಲ್ಲಿ ಕಟ್ಟಿಗೆಗಳನ್ನು ಹಾಕಿ ಸಂಜು ಹೆಣವನ್ನು ಸುಟ್ಟು ಹಾಕಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Share Post