ನಿನ್ನೆ ಒಂದೇ ದಿನಕ್ಕೆ 50 ಸಾವಿರ ಕೋವಿಡ್ ಕೇಸ್ ದಾಖಲು
ನವದೆಹಲಿ : ಭಾರತದಲ್ಲಿ ಮೂರನೇ ಅಲೆ ವ್ಯಪಿಸುತ್ತಿದೆ. ನಿನ್ನೆ ಒಂದೇ ದಿನ ಭಾರತದಲ್ಲಿ ೫೦ ಸಾವಿರ ಕೋವಿಡ್ ಕೇಸ್ ದೃಢಪಟ್ಟಿವೆ. ಮಹಾರಾಷ್ಟ್ರ, ದೆಹಲಿ, ಕೇರಳ ಕರ್ನಾಟಕ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೋವಿಡ್ ಸಂಖ್ಯೆ ವೇಗವಾಗಿ ಏರುತ್ತಿದೆ. ಮಂಗಳವಾರದ ಕೋವಿಡ್ ವರದಿಯ ಪ್ರಕಾರ ದೇಶದಲ್ಲಿ ಒಂದೇ ದಿನ 50,000 ಕ್ಕೂ ಹೆಚ್ಚಿನ ಕೋವಿಡ್ ಕೇಸ್ಗಳು ಪತ್ತೆಯಾಗಿವೆ
ಮಹಾರಾಷ್ಟ್ರ – 18,466
ಪಶ್ಚಿಮ ಬಂಗಾಳ – 9,073
ದೆಹಲಿ – 5,481
ಕೇರಳ – 3,640
ತಮಿಳುನಾಡು – 2,731
ಕರ್ನಾಟಕ – 2,479
ಗುಜರಾತ್ – 2,265
ರಾಜಸ್ಥಾನ – 1,137
ಲಂಗಾಣ – 1,052
ಪಂಜಾಬ್ – 1,027
ಬಿಹಾರ – 893
ಒಡಿಶಾ – 680
ಗೋವಾ – 592
ಆಂಧ್ರಪ್ರದೇಶ – 334
ಹಿಮಾಚಲ ಪ್ರದೇಶ – 260.
ವೇಗವಾಗಿ ಹರಡುತ್ತಿರುವ ಮೂರನೆ ಅಲೆಗೆ ಕಡಿವಾಣ ಹಾಕಲು ಕರ್ನಾಟಕ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂ ಜಾರಿ ಮಾಡಿದೆ. ಇನ್ನು ಬೆಂಗಳೂರಿನಲ್ಲಿ ಶಾಲಾ ಕಾಲೇಜುಗಳನ್ನು ಬಂದ್ ಮಾಡಿದೆ. ಕೋವಿಡ್ ಹೆಚ್ಚಳ ಕೈ ಮೀರುವ ಮುನ್ನ ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿ ಸರ್ಕಾರ ಎಚ್ಚೆತ್ತುಕೊಂಡಿದೆ.