CrimeNational

ಮುಂಬೈನಲ್ಲಿ ಮುಂಜಾನೆ ಭೀಕರ ಅಗ್ನಿ ದುರಂತ; 7 ಮಂದಿ ದುರ್ಮರಣ

ಮುಂಬೈ; ಮುಂಬೈನ ಬಹುಮಹಡಿ ಕಟ್ಟಡವೊಂದರಲ್ಲಿ ಇಂದು ಮುಂಜಾನೆ ಅಗ್ನಿ ದುರಂತ ಸಂಭವಿಸಿದೆ. ದುರ್ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದು, 51 ಮಂದಿಗೂ ಹೆಚ್ಚು ಜನ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಇಲ್ಲಿ ಗೋರೆಗಾಂವ್‌ನ ಪಶ್ಚಿಮ ಆಜಾದ್ ನಗರದ ಪ್ರದೇಶದ ಜೈ ಭವಾನಿ ಕಟ್ಟಡದಲ್ಲಿ ಈ ದುರಂತ ನಡೆದಿದೆ. ಗಾಯಗೊಂಡವರಲ್ಲಿ 2 ಪುರುಷರು ಮತ್ತು 28 ಮಹಿಳೆಯರು, ಓರ್ವ ಅಪ್ರಾಪ್ತ ಸೇರಿದ್ದಾರೆ.

ಮೊದಲು ಮುಂಜಾನೆ 3 ಗಂಟೆ ಸಮಯದಲ್ಲಿ ಪಾರ್ಕಿಂಗ್‌ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡೆ. ಅದು ನೋಡನೋಡುತ್ತಿದ್ದಂತೆ ಮೊದಲ ಹಾಗೂ ಎರಡನೇ ಮಹಡಿಗೆ ವ್ಯಾಪಿಸಿದೆ. ಹೀಗಾಗಿ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದ್ದ 4 ಕಾರು ಮತ್ತು 30 ಬೈಕ್‌ಗಳು ಸುಟ್ಟು ಕರಕಲಾಗಿವೆ. ಆದ್ರೆ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ.

 

Share Post