ಗಾಜಿಯಾಬಾದ್‌ನಲ್ಲಿ ರೈತರ ಪ್ರತಿಭಟನೆ: ಪೊಲೀಸರ ನಡುವೆ ಜಟಾಪಟಿ
ಗಾಜಿಯಾಬಾದ್: ಮಂಡಲ ವಿಹಾರ ಯೋಜನೆಗಾಗಿ ರೈತರ ಭೂಮಿ ವಶಪಡಿಸಿಕೊಂಡು ಐದು ವರ್ಷವಾದರೂ ಪರಿಹಾರ ನೀಡದಿರುವುದಕ್ಕೆ ಗಾಜಿಯಾಬಾದ್ ಲೋನಿಯ ರೈತರು ಪ್ರತಿಭಟನೆ ನಡೆಸಿದರು. ಹೌಸಿಂಗ್ ಡೆವಲೆಪ್‌ಮೆಂಟ್ ಕಚೇರಿಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ನೂಕಾಟ ತಳ್ಳಾಟ ನಡೆದಿದ್ದು, ಘಟನೆಯಲ್ಲಿ ಒಬ್ಬ ರೈತ ಮುಖಂಡರು ಗಾಯಗೊಂಡಿದ್ದಾರೆ.
ವಸತಿ ಸಮುಚ್ಚಯ ನಿರ್ಮಾಣಕ್ಕಾಗಿ ರೈತರ ನೂರಾರು ಎಕರೆ ಜಮೀನನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಯೋಜನೆ ಜಾರಿಯಾಗಿ ಐದು ವರ್ಷ ಕಳೆದಿದೆ. ಆದರೆ ರೈತರಿಗೆ ಮಾತ್ರ ಇನ್ನೂ ಪರಿಹಾರ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ರೈತರು ಬೃಹತ್ ಹೋರಾಟ ನಡೆಸಿದರು. ಲೋನಿಯಲ್ಲಿನ ಹೌಸಿಂಗ್ ಸೊಸೈಟಿ ಕಚೇರಿ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಭಾರಿ ಪ್ರಮಾಣದಲ್ಲಿದ್ದ ಪೊಲೀಸರು ರೈತರನ್ನು ತಡೆಯೋ ಪ್ರಯತ್ನ ಮಾಡಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ನೂಕಾಟ, ತಳ್ಳಾಟ ನಡೆದಿದೆ.
ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಈ ವೇಳೆ ವೃದ್ಧ ರೈತ ಮುಖಂಡರೊಬ್ಬರು ಗಾಯಗೊಂಡಿದ್ದಾರೆ. ತಲೆ ಪೆಟ್ಟು ಬಿದ್ದಿದ್ದು, ರಕ್ತ ಸೋರಿಕೆಯಾಗಿದೆ.