ಪಶ್ಚಿಮ ಬಂಗಾಳದಲ್ಲಿ ನಾಳೆಯಿಂದ ಶಾಲೆ, ಕಾಲೇಜು, ಸಿನಿಮಾ, ಸಲೂನ್ ಬಂದ್
ಕೋಲ್ಕತ್ತ : ಪಶ್ಚಿಮ ಬಂಗಾಳದಲ್ಲಿ ಓಮಿಕ್ರಾನ್ ಮತ್ತು ಕೋವಿಡ್ ಸೋಂಕು ಹೆಚ್ಚುತ್ತಿರುವ ನಿಟ್ಟಿನಲ್ಲಿ ನಾಳೆಯಿಂದ ಶಾಲೆ, ಕಾಲೇಜು, ಸಿನಿಮಾ, ಮಂದಿರ, ಮನರಂಜನಾ ತಾಣ, ಸಲೂನ್ , ಸ್ಪಾಗಳನ್ನು ಬಂದ್ ಮಾಡಲು ತೀರ್ಮಾನಿಸಲಾಗಿದೆ.
ಎಎನ್ಐ ವರದಿ ಪ್ರಕಾರ ಸರ್ಕಾರಿ ಕಚೇರಿಗಳಲ್ಲಿ ಶೇ ೫೦ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಸೂಚಿಸಿದೆ. ಒಂದೇ ವಾರದಲ್ಲಿ ಕೋಲ್ಕತ್ತ ಸೇರಿದಂತೆ ರಾಜ್ಯದಲ್ಲಿ ನಾಲ್ಕು ಪಟ್ಟು ಸೋಂಕು ಹೆಚ್ಚಾಗಿದೆ. ಪಾಸಿಟಿವಿಟಿ ರೇಟ್ ಶೇ 12.56 ಕ್ಕೆ ಹೆಚ್ಚಳಗೊಂಡಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೂಡ ತಮ್ಮ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳನ್ನು ಮುಂದೂಡಿದ್ದಾರೆ.
ಈ ಬಗ್ಗೆ ವೆಸ್ಟ್ ಬೆಂಗಾಲ್ನ ಚೀಫ್ ಸೆಕ್ರೆಟರಿ HK ದ್ವಿವೇದಿ ANI ಸುದ್ದಿ ಸಂಸ್ಥೆ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
All government and private offices to operate at 50% capacity, all administrative meetings to be conducted via virtual mode, West Bengal Chief Secretary HK Dwivedi added pic.twitter.com/oXY8YOCguL
— ANI (@ANI) January 2, 2022