EconomyNational

ಮತ್ತೊಮ್ಮೆ LPG ಬೆಲೆ ಇಳಿಕೆ!; ಗ್ರಾಹಕರಿಗೆ ಜುಲೈ ಮೊದಲ ದಿನವೇ ಖುಷಿ ಸುದ್ದಿ!

ಬೆಂಗಳೂರು; ಜುಲೈ ಮೊದಲ ದಿನವೇ ಖುಷಿ ಸುದ್ದಿ ಸಿಕ್ಕಿದೆ.. ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಮತ್ತೆ ಇಳಿಕೆ ಮಾಡಲಾಗಿದೆ.. 19 ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್‌ ಬೆಲೆಯಲ್ಲಿ 31 ರೂಪಾಯಿ ಇಳಿಕೆ ಮಾಡಿ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಆದೇಶ ಹೊರಡಿಸಿದೆ.. ಮಧ್ಯರಾತ್ರಿಯಿಂದಲೇ ಈ ಹೊಸ ದರ ಜಾರಿಯಾಗಿದೆ.. ಆದ್ರೆ ಗಥಹ ಬಳಕೆ ಸಿಲಿಂಡರ್‌ ಬೆಲೆ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದೆ..

ಹೋಟೆಲ್‌ ಸೇರಿದಂತೆ ವಾಣಿಜ್ಯ ಬಳಕೆ ಎಲ್‌ಪಿಸಿ ಬಳಸುವವವರಿಗೆ ಇದರಿಂದ ಸಾಕಷ್ಟು ಅನುಕೂಲವಾಗಲಿದೆ.. ಹೋಟೆಲ್‌ ಉದ್ಯಮಿಗಳು ಹಾಲಿನ ಬೆಲೆ ಏರಿಕೆಯಿಂದ ಕಾಫಿ ಬೆಲೆ ಏರಿಕೆಗೆ ಚಿಂತನೆ ನಡೆಸಿದ್ದರು.. ಆದ್ರೆ ಇದೀಗ ಎಲ್‌ಪಿಜಿ ಬೆಲೆ ಇಳಿಕೆ ಮಾಡಿರುವುದರಿಂದ ಹೋಟೆಲ್‌ ಉದ್ಯಮಿಗಳು ಸಾಕಷ್ಟು ಅನುಕೂಲವಾಗಲಿದೆ..

ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ 19 ಕೆಜಿಯ ಸಿಲಿಂಡರ್​ ಬೆಲೆ 1813 ರೂಪಾಯಿ ಇದೆ. ದೆಹಲಿಯಲ್ಲಿ ಪ್ರತಿ ಸಿಲಿಂಡರ್​ ಬೆಲೆ 1,646 ರೂಪಾಯಿ ಇದೆ. ಇದರಲ್ಲಿ ಈಗ 31 ರೂ. ಇಳಿಕೆಯಾಗಿದೆ.

 

Share Post