ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಕಾಜಲ್ ಅಗರ್‌ವಾಲ್
ಹೈದರಾಬಾದ್: ಟಾಲಿವುಡ್‌ನ ಬ್ಯೂಟಿಫುಲ್ ಬೆಡಗಿ ಕಾಜಲ್ ಅಗರ್‌ವಾಲ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಕಾಜಲ್ ಅಗರ್‌ವಾಲ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಅಂದ್ರೆ ಕಾಜಲ್ ತಾಯಿಯಾಗುತ್ತಿದ್ದಾರಂತೆ. ಈ ಬಗ್ಗೆ ಅಧಿಕೃತವಾಗಿ ಎಲ್ಲೂ ಹೇಳಿಕೊಂಡಿಲ್ಲ, ಹರಿದಾಡುತ್ತಿರುವ ಸುದ್ದಿಯನ್ನು ಸುಳ್ಳು ಎಂದು ಕೂಡ ಬಾಯ್ಬಿಟ್ಟಿಲ್ಲ. ಹಾಗಿದ್ದರೆ ನಟಿ ಕಾಜಲ್ ತಾಯಿಯಾಗಿರುವುದು ಖಚಿತ ಅಂತಿದ್ದಾರೆ ನಟ್ಟಿಗರು ಇದಕ್ಕೆ ಪೂರಕವಾಗಿ ಕಾಜಲ್ ಪತಿ ಗೌತಮ್ ತಮ್ಮ ಇನ್ಸ್‌ಸ್ಟಾಗ್ರಾಂನಲ್ಲಿ ಫೋಟೊ ಹಂಚಿಕೊಂಡು 2022ನೇ ವರ್ಷ ನಿಮ್ಮ ಬರುವಿಕೆಗೆ ಎದುರು ನೋಡುತ್ತಿದೆ ಎಂದು ಪೋಸ್ಟ್ ಹಾಕಿದ್ದಾರೆ. ಇದರರ್ಥ ಕಾಜಲ್ ದಂಪತಿ ಮೊದಲ ಮಗುವಿನ ನಿರೀಕ್ಷೆ ಎಂದು ತಿಳಿದಿ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿ ಶುಭಾಷಯಗಳ ಸುರಿಮಳೆಗೈದಿದ್ದಾರೆ.
2020ರ ಅಕ್ಟೋಬರ್ 30ರಂದು ಮುಂಬೈನಲ್ಲಿ ಬಹುಕಾಲದ ಸ್ನೇಹಿತ ಗೌತಮ್ ಕಿಚ್ಲು ಕೈ ಹಿಡಿದ ಕಾಜಲ್ ಅಗರ್‌ವಾಲ್ ಪ್ರಸ್ತುತ ಆಚಾರ್ಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸೆಟ್ ತುಂಬಾ ನಟಿ ತಾಯಿಯಾಗಿರುವ ಸುದ್ದಿ ಹಬ್ಬಿದೆ. ಆಚಾರ್ಯ ಸಿನಿಮಾ ಮೆಗಾಸ್ಟಾರ್ ಅಭಿನಯದ ಸಿನಿಮಾ ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿ ಬರಲಿದೆ.