Cinema

ರಿಷಬ್‌ ಶೆಟ್ಟಿ ಅತ್ಯುತ್ತಮ ನಟ, ಕೆಜಿಎಫ್‌-2 ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ

ನವದೆಹಲಿ; 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಘೋಷಣೆ ಮಾಡಲಾಗಿದೆ.. ಕನ್ನಡದ ಚಿತ್ರಗಳು ಹಾಗೂ ನಟಿ, ನಟಿಯರಿಗೂ ಪ್ರಶಸ್ತಿ ಘೋಷಣೆಯಾಗಿದೆ. ಕೆಜಿಎಫ್‌-2 ಚಿತ್ರಕ್ಕೆ ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಿಕ್ಕಿದೆ. ಕಾಂತಾರಾ ಚಿತ್ರದ ನಟನೆಗಾಗಿ ರಿಷಬ್‌ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ; 18 ಮನೆ ಕಳವು ಮಾಡಿದ್ದ ಕೆಜಿಎಫ್‌ ಗ್ಯಾಂಗ್‌ ಅಂದರ್‌!

ಕೇಂದ್ರ ಸರ್ಕಾರದ ವಾರ್ತಾ, ಪ್ರಸಾರ ಇಲಾಖೆ ವತಿಯಿಂದ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ.. 2022ರ ಜನವರಿ 1 ರಿಂದ ಡಿಸೆಂಬರ್ 31ರವರೆಗೆ ಬಿಡುಗಡೆಯಾದ ಸಿನಿಮಾನಗಳಿಗೆ ಈ ಪ್ರಶಸ್ತಿಗಳು ಘೋಷಣೆ ಮಾಡಿದ್ದು, ಕೆಜಿಎಫ್‌-2 ಚಿತ್ರಕ್ಕೆ ಕನ್ನಡದ ಅತ್ಯುತ್ತಮ ಚಿತ್ರ ಹಾಗೂ ಸಾಹಸ ವಿಭಾಗದಲ್ಲೂ ಈ ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿದೆ. ಕಾಂತಾರಾ ಸಿನಿಮಾಗೂ ಎರಡು ಪ್ರಶಸ್ತಿ ಸಿಕ್ಕಿದ್ದು, ರಿಷಬ್‌ ಶೆಟ್ಟಿ ಅತ್ಯುತ್ತಮ ನಟ ಹಾಗೂ ಮನೋರಂಜನಾ ಪ್ರಶಸ್ತಿ ಸಿಕ್ಕಿದೆ.

ಇದನ್ನೂ ಓದಿ; ಐಫೋನ್‌ ತಯಾರಿಕಾ ಸಂಸ್ಥೆ ಅಧ್ಯಕ್ಷ ರಾಜ್ಯಕ್ಕೆ; ಲಕ್ಷ ಉದ್ಯೋಗ ಸೃಷ್ಟಿ!

Share Post