International

ನ್ಯೂಯಾರ್ಕ್‌ – ಒಂದೇ ದಿನ 85ಸಾವಿರ ಕೊರೊನಾ ಕೇಸ್‌ ದಾಖಲೆ

ನ್ಯೂಯಾರ್ಕ್‌ : ಅಮೆರಿಕಾದಲ್ಲಿ ಮೂರನೇ ಅಲೆ ಶುರುವಾದಂತೆ ಕಾಣ್ತಿದೆ. ದಿನಕ್ಕೆ ೫ಲಕ್ಷಕ್ಕೂ ಹೆಚ್ಚು ಕೇಸ್‌ಗಳು ಬರ್ತಿವೆ. ಪಾಸಿಟಿವ್‌ ರೇಟ್‌ ಕೂಡ ಗಣನೀಯವಾಗಿ ಏರಿಕೆ ಕಾಣ್ತಿದೆ. ನ್ಯೂಯಾರ್ಕ್‌ ಸಿಟಿ ಒಂದರಲ್ಲೇ ೮೫ ಸಾವಿರಕ್ಕೂ ಹೆಚ್ಚು ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ.

2021ರ ಕೊನೆಯ ದಿನ ನ್ಯೂಯಾರ್ಕ್‌ ಒಂದರಲ್ಲೇ 85 ಸಾವಿರಕ್ಕೂ ಹೆಚ್ಚು ಕೇಸ್‌ಗಳು ದಾಖಲಾಗಿವೆ. ಕೋವಿಡ್‌ ಆರಂಭವಾದಾಗಿನಿಂದ ಇದುವರೆಗು ನೋಡಿದರೆ ಶನಿವಾರವೇ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟು 85476 ಮಂದಿಗೆ ಶನಿವಾರ ಕೋವಿಡ್‌ ದೃಢ ಪಟ್ಟಿದೆ. ಪರೀಕ್ಷೆಗೆ ಒಳಗಾದವರಲ್ಲಿ ಶೇ22 ರಷ್ಟು ಮಂದಿಗೆ ಕೋವಿಡ್‌ ದೃಢವಾಗಿರೋದು ಚಿಂತೆಗೆ ಕಾರಣವಾಗಿದೆ. ಅಮೇರಿಕಾ ರಾಷ್ಟ್ರದಾದ್ಯಂತ ಶನಿವಾರ 5,85,013 ಕೇಸ್‌ಗಳು ದಾಖಲಾಗಿವೆ. ಇದರಲ್ಲಿ 1181 ಮಂದಿ  ಮೃತಪಟ್ಟಿದ್ದಾರೆ

 

Share Post