Cinema

ಮಲಯಾಳಂ ಚಿತ್ರರಂಗದ ಹಿರಿಯ ನಟ ಜಿಕೆ ಪಿಳ್ಳೈ ನಿಧನ

ಮಲಯಾಳಂ: ವಯೋಸಹಜ ಕಾಯಿಲೆಯಿಂದ ಹಿರಿಯ ನಟ ಜಿಕೆ ಪಿಳ್ಳೈ ಇಂದು ನಿಧನರಾಗಿದ್ದಾರೆ. ಅವರಿಗೆ ೯೭ ವರ್ಷ ವಯಸ್ಸ ಆಗಿದ್ದು, ಕೆಲ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಪಿಳ್ಳೈ ತಿರುವನಂತಪುರಂನ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಪಿಳ್ಳೈ ಅವರಿಗೆ ಮೂವರು ಹೆಣ್ಣು ಮಕ್ಕಳು, ಮೂವರು ಗಂಡು ಮಕ್ಕಳು ಇದ್ದಾರೆ.

ಇನ್ನು ಅವರ ಪತ್ನಿ ಕೂಡ ಕೆಲ ವರ್ಷಗಳ ಹಿಂದೆ ನಿಧನ ಹೊಂದಿದ್ದರು. ಪಿಳ್ಳೈ ಚಿತ್ರರಂಗಕ್ಕೆ ಬರುವುದಕ್ಕಿಂತ ಮೊದಲು ಭಾರತೀಯ ನೌಕಾಪಡೆಯಲ್ಲಿ ಕಾರ್ಯನಿರ್ವಹಿಸಿದ್ದರು. 1954 ರಲ್ಲಿ ಪಿಳ್ಳೈ ನಟನೆಯ ಮೊದಲ ಸಿನಿಮಾ ‘ಸ್ನೇಹಸೀಮಾ’ ಬಿಡುಗಡೆ ಆಗಿತ್ತು. ಈ ಸಿನಿಮಾದ ಮೂಲಕ ಅವರು ಚಿತ್ರರಂಗಕ್ಕೆ ಪರಿಚಯವಾದರು. ನಂತರ ಆ ಸಿನಿಮಾವನ್ನು ಆಗಿನ ಜನಪ್ರಿಯ ನಿರ್ದೇಶಕ ಎಸ್‌ಎಸ್ ರಾಜನ್ ನಿರ್ದೇಶನ ಮಾಡಿದ್ದರು. ಅವರು ಹೆಚ್ಚಾಗಿ ವಿಲನ್‌ ಪಾತ್ರಗಳಲ್ಲೆ ಕಾಣಿಸಿಕೊಂಡಿದ್ದರು.ಬಳಿಕ ಚಿತ್ರರಂಗ ಯಶಸ್ವಿ ನಟನಾಗಿ ಗುರುತಿಸಿಕೊಂಡರು. ಅಷ್ಟೇ ಅಲ್ಲದೆ ಸಿನಿಮಾಗಳಲ್ಲಿ ಮಾತ್ರವೇ ಅಲ್ಲದೆ ಟಿವಿ ಧಾರಾವಾಹಿಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದರು.

Share Post