BengaluruDistricts

ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ

ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ಸ್ಥಳೀಯ ಸಂಸ್ಥೆ ಚುನಾವಣೆಯ  ಮತ ಎಣಿಕೆ ಇಂದು ನಡೆಯುತ್ತಿದೆ. ಬೆಳಗ್ಗೆ ಚಿಕ್ಕಮಗಳೂರು, ತುಮಕೂರು ಜಿಲ್ಲೆಯ ಶಿರಾ , ಗದಗ- ಬೆಟಗೇರಿ, ಬೆಂಗಳೂರು ನಗರ ಜಿಲ್ಲೆ ಹೆಬ್ಬಗೋಡಿ ಸೇರಿದಂತೆ ೧೯ ಪುರಸಭೆ ಮತ್ತು ೩೪ ಪಟ್ಟಣ ಪಂಚಾಯಿತಿಗಳಿಗೆ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ.
ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಅಧಿಕಾರ ಜೆಡಿಎಸ್‌ ತೆಕ್ಕೆಗೆ. ಒಟ್ಟು ೨೩ ಸ್ಥಾನಗಳ ಪೈಕಿ ೧೪ ಸ್ಥಾನಗಳು ಜೆಡಿಎಸ್‌ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ೨೭ ವಾರ್ಡ್‌ ನಿಂದ ಬಿಜೆಪಿ ಶಕುಂತಲಮ್ಮ ಗೆಲುವು ಸಾಧಿಸಿದ್ದು, ೩೦ ನೇ ವಾರ್ಡ್‌ ನಿಂದ ಪಕ್ಷೇತರ ಅಭ್ಯರ್ಥಿ ಜಯಗೊಂಡಿದ್ದಾರೆ.
ಇನ್ನು ಚಿಕ್ಕಮಗಳೂರಿನಲ್ಲಿ ನಗರಸಭೆಯ ೧೬ ವಾರ್ಡ್‌ ಗಳಲ್ಲಿ ಫಲಿತಾಂಶ ಪ್ರಕಟವಾಗಿದೆ. ಅದರಲ್ಲಿ ಬಿಜೆಪಿ ೬, ಕಾಂಗ್ರೆಸ್‌ ೬, ಪಕ್ಷೇತರ ೨, ಜೆಡಿಎಸ್‌ ತಲಾ ಒಂದು ಸ್ಥಾನ ಪಡೆದುಕೊಂಡಿದೆ.
ವಾರ್ಡ್ ನಂಬರ್ 24 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗುರುಮಲ್ಲಪ್ಪ ಗೆಲುವು, ವಾರ್ಡ್ ನಂ 31 ಬಿಜೆಪಿ ಅಭ್ಯರ್ಥಿ ದೀಪಾ ರವಿ ಗೆಲುವು, ವಾರ್ಡ್ ನಂ 10 ರಲ್ಲಿ ಬಿಜೆಪಿ ಅಭ್ಯರ್ಥಿ ರೂಪಕುಮಾರ್ ಗೆಲುವು, ವಾರ್ಡ್ ನಂ 3 ರಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್ ಗೆಲುವು ಗೆಲುವು ಸಾಧಿಸಿದ್ದಾರೆ.
ಬೆಳಗಾವಿಯ ಚಿಕ್ಕೋಡಿ ತಾಲೂಕಿನಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರ ಕಾಂಗ್ರೆಸ್‌ ತೆಕ್ಕೆಗೆ ಬಂದಿದೆ. ದಾವಣಗೆರೆ ಜಿಲ್ಲೆಯ ಮಲೇಬೆನ್ನೂರು ಪುರಸಭೆಯಲ್ಲಿ ಬಹುತೇಕ ಕಾಂಗ್ರೆಸ್‌ ಬಹುಮತ ಪಡೆದುಕೊಂಡಿದೆ.

Share Post